ಪುತ್ತೂರು: ಕೊಡಿಪಾಡಿ ಗ್ರಾಮದ ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ಫೆ.10ರಿಂದ ಫೆ.12ರ ವರೆಗೆ ಶ್ರೀ ಧೂಮಾವತಿ-ಬಂಟ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಜಾವತೆ, ಗುಳಿಗ ಹಾಗೂ ಪರಿವಾರ ದೈವಗಳ ಧರ್ಮನೇಮೋತ್ಸವ ನಡೆಯಲಿದೆ.
ಫೆ.10ರಂದು ಬೆಳಗ್ಗೆ 7.೦೦ಕ್ಕೆ ಗಣಪತಿ ಹೋಮ, ನಾಗತಂಬಿಲ, ಚಂಡಿಕಾಹೋಮ, ಹರಿಸೇವೆ ನಡೆದು ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 7.00ಕ್ಕೆ ವರ್ಣರ ಪಂಜುರ್ಲಿ ಹಾಗೂ ಜಾವತೆ ದೈವಗಳ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ ನಡೆದು ನೇಮೋತ್ಸವ ನಡೆಯಲಿದೆ.
ಫೆ.11ರಂದು ಸಾಯಂಕಾಲ 4ಕ್ಕೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ನೇಮೋತ್ಸವ ನಡೆಯಲಿದೆ.
ಫೆ.12ರಂದು ಸಾಯಂಕಾಲ 6.00ಕ್ಕೆ ಶ್ರೀ ಧರ್ಮದೈವ ಧೂಮಾವತಿ -ಬಂಟ ದೈವಗಳ ಭಂಡಾರ ತೆಗೆಯುವುದು ಹಾಗೂ ನೇಮೋತ್ಸವ ಮತ್ತು ಗುಳಿಗ ನೇಮೋತ್ಸವ ಹಾಗೂ ದೈವಗಳ ಕುರಿತಂಬಿಲ ನಡೆಯಲಿದೆ ಎಂದು ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್ (ರಿ) ಪುತ್ತೂರು ಇದರ ಅಧ್ಯಕ್ಷರಾದ ಡಾ. ಕೆ.ಸಿ. ನಾಯ್ಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.