ತೆಂಕಿಲ ವಿವೇಕಾನಂದ ಆ. ಮಾ ಶಾಲೆಯ 8 ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಪುತ್ತೂರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮೈಸೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೈಸೂರು, ಇವರ ಸಂಯುಕ್ತ ಆಶ್ರಯದಲ್ಲಿ  ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಫೆಬ್ರವರಿ 19 ಮತ್ತು 22 ರವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆಯ 8 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 7ನೇ ತರಗತಿಯ ದಿವಿಜ್ಞಾ.ಯು.ಎಸ್ (ಕಲ್ಲರ್ಪೆ ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿ ಪುತ್ರಿ) 100ಮೀ , 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) 400 ಮೀ, 600ಮೀ,  4×100 ಮೀ ರಿಲೇ, 8ನೇ ತರಗತಿಯ ಡಿಂಪಲ್ ಶೆಟ್ಟಿ(ಮೇರ್ಲ ಉದಯ ಶೆಟ್ಟಿ ಹಾಗೂ ಸುನೀತಾ ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ,  17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಬಿ.ಲಿಖಿತಾ ರೈ (ಬಿ.ಜಗನ್ನಾಥ ರೈ ಮತ್ತು ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀ ರಿಲೇ, 9ನೇ ತರಗತಿಯ ಸಾನ್ವಿ ಎಸ್.ಪಿ (ಸೇನಾ ಯೋಧ ಪಳಂಬೆ ಸುಂದರ ಪೂಜಾರಿ ಹಾಗೂ ಶಿಕ್ಷಕಿ ಭವಿತಾ ದಂಪತಿ ಪುತ್ರಿ) 4×100 ಮೀ ರಿಲೇ, 9ನೇ ತರಗತಿಯ ರಿದ್ಧಿ ಶೆಟ್ಟಿ (ಚಿದಾನಂದ ಹಾಗೂ ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ, 14ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನೀತಾ ದಂಪತಿ ಪುತ್ರ) 4×100 ಮೀ ರಿಲೇ, 8ನೇ ತರಗತಿಯ ಮನೋಹರ್ (ಪರ್ಲಡ್ಕ ಮಿಶ್ರಾ ರಾಮ್ ಹಾಗೂ ಲಕ್ಷ್ಮೀ ದಂಪತಿ ಪುತ್ರ) 4×100 ಮೀ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

 ಈ ಸ್ಪರ್ಧೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಕಣಿಯಾರು ಮತ್ತು ರಶ್ಮಿ , ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ  ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here