ಪುತ್ತೂರು: ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಪ್ರಧಾನ/ಉಪ/ಶಾಖಾ ಅಂಚೆ ಕಛೇರಿಗಳಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಎಲ್ಲಾ ಅಂಚೆ ಬಟವಾಡೆದಾರರು ತಮ್ಮ ಬಟವಾಡೆಯ ಸಮಯದಲ್ಲಿ ಅಂಚೆ ಕಛೇರಿಯಲ್ಲಿ ಯಾವುದೇ ಖಾತೆ ತೆರೆಯಲು ಬೇಕಾದ ಅರ್ಜಿನಮೂನೆಗಳನ್ನು ಹೊಂದಿರುತ್ತಾರೆ. ಪ್ರಾದೇಶಿಕ ಬಟವಾಡೆದಾರರು ಗ್ರಾಹಕರ ಮನೆ ಬಾಗಿಲಿಗೆ ಬಂದಾಗ ಅಥವಾ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತಮ್ಮ ಅಭಿಲಾಷೆಗನುಗುಣವಾಗಿ ಅಂಚೆ ಕಛೇರಿಯಲ್ಲಿ ಲಭ್ಯವಿರುವ ಖಾತೆಗಳನ್ನು ಸೂಕ್ತ ದಾಖಲೆಯನ್ನು ಒದಗಿಸುವ ಮೂಲಕ ತೆರೆಯಬಹುದಾಗಿದೆ. ಈ ಮನೆಬಾಗಿಲಲ್ಲಿ ಒದಗಿಸುವ ಸೇವೆಯನ್ನು ಗ್ರಾಹಕ ಬಂಧುಗಳು ಉಪಯೋಗಿಸಿಕೊಳ್ಳಬೇಕೆಂದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.