ಕೆಯ್ಯೂರು – ಮಾಡಾವು ವರ್ತಕ ಸಂಘದ ವಾರ್ಷಿಕ ಮಹಾಸಭೆ

0

ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಿ: ಅಬ್ದುಲ್ ರಝಾಕ್

ಕೆಯ್ಯೂರು : ಕೆಯ್ಯೂರು – ಮಾಡಾವು ವರ್ತಕ ಸಂಘದ ವರ್ಷದ ಮಹಾಸಭೆಯು ಫೆ.14ರಂದು ಕೆಯ್ಯೂರು ದೇವಿನಗರ ವಿಶ್ವ ಚೇತನ ಸಂಕೀರ್ಣದಲ್ಲಿ ಕೆಯ್ಯೂರು- ಮಾಡಾವು ವರ್ತಕ ಸಂಘದ ಅಧ್ಯಕ್ಷ ಸಿ.ಎಂ.ಅಬ್ದುಲ್ ರಝಾಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲಾಗಿ ವರ್ತಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕಾನೂನಿನ ಮೂಲಕ ಯಾವುದೇ ವಿಷಯವನ್ನು ವರ್ತಕರು ಪಾಲಿಸಬೇಕು, ವರ್ತಕರ ಒಗ್ಗಟಿನ ಬಲ ಬೆಳವಣಿಗೆಗೆ ಮುನ್ನುಡಿ ಎಂದರು.

ಮುಖ್ಯ ಅತಿಥಿಗಳಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪುತ್ತೂರು ಅಧ್ಯಕ್ಷ ಜೋನು ಕುಟಿನ್ಹ ಮಾತನಾಡಿ ಪರಸ್ಪರ ಒಗ್ಗೂಡುವಿಕೆಯಿಂದ ನಾಗರೀಕರ ಮನವೊಲಿಸುವಿಕೆ ವರ್ತಕರ ಕೆಲಸ. ಜನರ ಮನಸ್ಸನ್ನು ನೋಯಿಸದೆ ಪ್ರೀತಿಯಿಂದ ಬರ ಮಾಡಿಕೊಂಡರೆ ಒಳ್ಳೆಯ ಅಭಿವೃದ್ಧಿ ಕಾಣಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಕೆಯ್ಯೂರು ಮಾಡಾವು ವರ್ತಕ ಸಂಘದ ಕಾರ್ಯದರ್ಶಿ ‌ವಿಶ್ವನಾಥ ಪೂಜಾರಿ ಕೆಂಗುಡೇಲು 2021-22ರ ಸಾಲಿನ ವರದಿ ಮತ್ತು ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಕೋಶಾಧಿಕಾರಿ ಶೀನಪ್ಪ ರೈ ದೇವಿನಗರ 2021-22ರ ಖರ್ಚು, ವೆಚ್ಚಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ‌ವೇದಿಕೆಯಲ್ಲಿ ಕೆಯ್ಯೂರು ಮಾಡಾವು ವರ್ತಕ ಸಂಘದ ಸ್ಥಾಪಕಾಧ್ಯಕ್ಷ ಆನಂದ ರೈ ದೇವಿನಗರ, ತಿಂಗಳಾಡಿ ವರ್ತಕ ಸಂಘದ ಸ್ಥಾಪಕಾಧ್ಯಕ್ಷ ಹರೀಶ್ ಪುತ್ತೂರಾಯ, ಕುಂಬ್ರ ವರ್ತಕ ಸಂಘದ ಸ್ಥಾಪಾಕಾಧ್ಯಕ್ಷ ಶ್ಯಾಂ ಸುಂದರ್ ರೈ, ಕೆಯ್ಯೂರು ಗ್ರಾ.ಪಂ. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸದಸ್ಯತ್ವ ನವೀಕರಿಸಿದ ಸದಸ್ಯರಿಗೆ ಲಕ್ಕಿ ಡ್ರಾ ಮೂಲಕ ವಿಶೇಷ ಬಹುಮಾನವನ್ನು ವರ್ತಕ ಶ್ರೀಧರ ಭಂಡಾರಿ ಮಾಡಾವು ಪಡೆದುಕೊಂಡರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪುತ್ತೂರು ಪದಾಧಿಕಾರಿಗಳಾದ ಉಲ್ಲಾಸ್ ಪೈ, ಶ್ರೀಕಾಂತ ಕೊಳತ್ತಾಯ, ವಿಶ್ವ ಪ್ರಸಾದ್ ಸೇಡಿಯಾಪು, ಝೇವಿಯರ್ ಡಿ.ಸೋಜ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೆಂತರೋ ಡಿ.ಸೋಜ, ಕೆಯ್ಯೂರು ಮಾಡಾವು ವರ್ತಕ ಸಂಘದ ಮಾಜಿ ಅಧ್ಯಕ್ಷ ಭರತ್ ಕುಮಾರ್ ಮಾಡಾವು, ಎಂ.ಎಂ.ಹುಸೈನಾರ್ ಮಾಡಾವು, ಅನಿಲ್ ಡಿ.ಸೋಜ ನೂಜಿ, ಅಬ್ದುಲ್ ಖಾದರ್ ಮೆರ್ಲ, ಹನೀಫ್ ಕೆ.ಎಂ, ಚಂದ್ರಶೇಖರ ಶೆಟ್ಟಿ,‌ ಚಂದ್ರಶೇಖರ ಆಚಾರ್ಯ, ಮೋನಪ್ಪ ಲಕ್ಷ್ಮೀ ಎಲೆಕ್ಟ್ರಿಕಲ್ ದೇವಿನಗರ, ಆಶ್ರಫ್ ಟೈಲರ್, ಅಶೋಕ ದೇವಿನಗರ, ವಿ.ಎ.ರಮೇಶ ದೇವಿನಗರ, ಇಬ್ರಾಹಿಂ ಮಾಡಾವು ಕಟ್ಟೆ, ಇಸ್ಮಾಯಿಲ್ ಹೋನೆಸ್ಟ್, ಅಶೋಕ ಕೆಯ್ಯೂರು, ಪ್ರವೀಣ್ ಶೆಟ್ಟಿ ಕೂಡೇಲು, ಯೂಸುಫ್ ಕೆಯ್ಯೂರು, ವಸಂತ ರೈ ಸಣಂಗಳ, ಉಮೇಶ್ ಎ.ಜೆ, ದಿನೇಶ್ ಕೆ.ಎಸ್, ಮನಮೋಹನ ಕಣಿಯಾರು, ಛಾಯ ಗ್ರಾಹಕ ಜಗದೀಶ್ ಕೆಯ್ಯೂರು, ರಮೇಶ ಕೆಯ್ಯೂರು, ಶೋಭಾ ಕೆಯ್ಯೂರು, ರಜನಿ ಕೈತ್ತಡ್ಕ, ಮತ್ತು ಎಲ್ಲಾ ವರ್ತಕರು ಉಪಸ್ಥಿತರಿದ್ದರು. ವಿಧ್ಯಾರ್ಥಿ ತನ್ವಿ ಎಚ್ ರೈ ಪ್ರಾರ್ಥಿಸಿ, ವರ್ತಕ ಸಂಘದ ಮಾಜಿ ಅದ್ಯಕ್ಷರಾದ ‌ಮೆಹಮೂದ್ ಪಿ.ವೈ ಸ್ವಾಗತಿಸಿ, ಸುಬ್ರಾಯಗೌಡ ವಂದಿಸಿ, ಅಬ್ದುಲ್ ‌ಬಶೀರ್ ಮಾಸ್ಟರ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here