ಕಾವು: ದಶಸಂಭ್ರಮದಲ್ಲಿ ನನ್ಯ ತುಡರ್ ಭಜನಾ ಸಂಘ

0

ನ.23ಕ್ಕೆ ಭಜನಾ ಸಂಕೀರ್ತನೆ-ಸಾಮೂಹಿಕ ದುರ್ಗಾಪೂಜೆ-ಧಾರ್ಮಿಕ ಸಭೆ

ಕಾವು: ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿರುವ ತುಡರ್ ಭಜನಾ ಸಂಘವು 10 ವರ್ಷಗಳನ್ನು ಪೂರೈಸಿ ದಶಸಂಭ್ರಮದಲ್ಲಿದ್ದು, ನ.23ರಂದು ಸಂಜೆ ನನ್ಯ ಜನಮಂಗಲ ಸಭಾಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದಶಸಂಭ್ರಮವು ವಿಜೃಂಭಣೆಯಿಂದ ನಡೆಯಲಿದೆ.

ಭಜನಾ ಸಂಕೀರ್ತನೆ
ಸಂಜೆ ಗಂಟೆ 4 ರಿಂದ ದೀಪ ಪ್ರಜ್ವಲನೆಗೊಂಡು ಭಜನಾ ಸಂಕೀರ್ತನೆ ನಡೆಯಲಿದೆ. ತುಡರ್ ಭಜನಾ ಸಂಘ ನನ್ಯ-ಕಾವು, ತುಡರ್ ಮಾತೃ ಭಜನಾ ಮಂಡಳಿ, ತುಡರ್ ಸುಜ್ಞಾನ ಮಕ್ಕಳ ಭಜನಾ ಸಂಘ, ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿ ಮಾಣಿಯಡ್ಕ, ಕೌಡಿಚ್ಚಾರ್‌ ಶ್ರೀಕೃಷ್ಣ ಭಜನಾ ಮಂದಿರದವರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಲಿದ್ದಾರೆ.


ಸಾಮೂಹಿಕ ದುರ್ಗಾಪೂಜೆ
ಸಂಜೆ ಗಂಟೆ 5ರಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ಸಾಮೂಹಿಕ ದುರ್ಗಾಪೂಜೆ ನಡೆದು ಸಂಜೆ ಗಂಟೆ 7ಕ್ಕೆ ಮಹಾಮಂಗಳಾರತಿ ನಡೆಯಲಿದೆ.


ಧಾರ್ಮಿಕ ಸಭೆ-ಸನ್ಮಾನ
ತುಡರ್ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯರವರು ಸಭಾಧ್ಯಕ್ಷತೆ ವಹಿಸಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್-ಶ್ರೀ ದತ್ತಾಂಜನೇಯ ಕ್ಷೇತ್ರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಲಿದ್ದಾರೆ. ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಶುಭಾಶಂಸನೆ ಮಾಡಲಿದ್ದು, ದಾಸ ಸಾಹಿತ್ಯ ಸಂಕೀರ್ತನಕಾರ ಹಾಗೂ ಪ್ರಚಾರಕರೂ ಆಗಿರುವ ರಾಮಕೃಷ್ಣ ಕಾಟುಕುಕ್ಕೆಯವರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಉಪಸ್ಥಿತಿ ವಹಿಸಲಿದ್ದಾರೆ. ಧಾರ್ಮಿಕ ಕ್ಷೇತ್ರದ ಸೇವೆಗಾಗಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ ಮತ್ತು ಭಜನಾ ಕ್ಷೇತ್ರದ ಸೇವೆಗಾಗಿ ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭೆಯ ಬಳಿಕ ದುರ್ಗಾಪೂಜೆಯ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಕ ಮಂಡಲಕ್ಕೆ ಭಜನಾ ಸಂಘವೇ ದೊಡ್ಡ ಶಕ್ತಿ
ಧಾರ್ಮಿಕ ಮುಖಂಡರೂ ನಮ್ಮ ಯುವಕ ಸಂಘದ ಮಾರ್ಗದರ್ಶಕರೂ ಆಗಿರುವ ನನ್ಯ ಅಚ್ಚುತ ಮೂಡೆತ್ತಾಯರವರ ಸಲಹೆಯಂತೆ 2015ರಲ್ಲಿ ಯುವಕ ಸಂಘದಲ್ಲಿ ಭಜನಾ ಸಂಘವನ್ನು ಆರಂಭ ಮಾಡಿ ಅವರ ಮೂಲಕವೇ ದೀಪ ಬೆಳಗಿಸಿ ಭಜನಾ ಸಂಘದ ಉದ್ದೀಪನವಾಯಿಯಿ. ಬಳಿಕ ಭಜನಾ ಸಂಘದ ಮೂಲಕ ಪ್ರತಿ ತಿಂಗಳು ಹುಣ್ಣಿಮೆ ರಾತ್ರಿಯಂದು ಮನೆ-ಮನೆಯಲ್ಲಿ ಭಜನೆ, ವಿಶೇಷ ಸಂಧರ್ಭದಲ್ಲಿ ಆಹ್ವಾನಿತ ಮನೆಗಳಲ್ಲಿ ಭಜನಾ ಸೇವೆ ನಡೆಸುವ ಮೂಲಕ ಭಜನಾ ತಂಡವನ್ನು ಬೆಳೆಸುವಲ್ಲಿ ಯುವಕ ಮಂಡಲದ ಸದಸ್ಯರು ಯಶಸ್ವಿಯಾಗಿದ್ದಾರೆ. ಪ್ರತಿ ವರ್ಷ ಭಜನಾ ಸಂಘದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಧಾರ್ಮಿಕ ಸಭೆಯ ಮೂಲಕ ಧರ್ಮಜಾಗೃತಿಯನ್ನು ಮೂಡಿಸುವ ಕೆಲಸ ಭಜನಾ ಸಂಘದಿಂದಾಗಿದೆ, ಅದರಲ್ಲೂ ತುಡರ್ ಭಜನಾ ಸಂಘದ ಆರಂಭದ ಬಳಿಕ ನಮ್ಮ ಗ್ರಾಮದಲ್ಲಿ ಹಲವಾರು ಭಜನಾ ಸಂಘಗಳ ಉದ್ದೀಪನವಾಗಿ ಭಜನಾ ಕ್ಷೇತ್ರ ವಿಸ್ತಾರವಾಗಿ ಬೆಳೆಯಲು ಕಾರಣವಾಗಿದೆ.

2018ರಲ್ಲಿ ದಾಸ ಸಾಹಿತ್ಯ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆಯವರು ನಮ್ಮ ಸಂಘದಲ್ಲಿ 3 ತಿಂಗಳ ಭಜನಾ ತರಬೇತಿಯನ್ನು ನಡೆಸಿ ತುಡರ್ ಭಜನಾ ಸಂಘವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆ ಬಳಿಕ ಭಜನಾ ಸಂಘದಲ್ಲಿ ಮಾತೃಭಜನಾ ಮಂಡಳಿ, ಸುಜ್ಞಾನ ಮಕ್ಕಳ ಭಜನಾ ಸಂಘ, ಕುಣಿತ ಭಜನಾ ತಂಡವನ್ನು ಆರಂಭಿಸುವುದರ ಮೂಲಕ ಭಜನಾ ಸಂಘವನ್ನು ಮತ್ತಷ್ಟು ಗಟ್ಟಿಯಾಗಿಸಿದೆ. ತುಡರ್ ಯುವಕ ಮಂಡಲದ 15 ವರ್ಷದ ಸಾಧನೆಯ ಪಥದಲ್ಲಿ ಭಜನಾ ಸಂಘವು ಅವಿಭಾಜ್ಯ ಅಂಗವಾಗಿ ಸಂಘಟನೆಗೆ ದೊಡ್ಡ ಶಕ್ತಿಯನ್ನು ನೀಡಿದೆ. ಭಜನಾ ಸಂಘವು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ದಶಸಂಭ್ರಮದಲ್ಲಿದ್ದು, ನ.23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಪನ್ನಗೊಳ್ಳಲಿದೆ.
ಸುಬ್ರಾಯ ಬಲ್ಯಾಯ-ಸ್ಥಾಪಕಾಧ್ಯಕ್ಷರು, ತುಡರ್ ಯುವಕ ಮಂಡಲ

LEAVE A REPLY

Please enter your comment!
Please enter your name here