ನೆಲ್ಯಾಡಿ: ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಬಳಿಕ ದೈವಗಳ ನೇಮೋತ್ಸವ ನಡೆಯಿತು.
ಫೆ.14ರಂದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ ನಡೆದು ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ, ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಿತು.
ಫೆ.15ರಂದು ಅಪರಾಹ್ನ ದೊಂಪದ ಬಲಿಯ ಮಾರಿ ಪೂಜೆ ನಡೆಯಿತು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಅರ್ಚಕರು, ಮೊಕ್ತೇಸರರೂ ಆದ ನಾರಾಯಣ ಬಡೆಕ್ಕಿಲ್ಲಾಯ, ದೇವಸ್ಥಾನದ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಎ.ಸುಂದರ ಗೌಡ ಸಚಿನ್, ಅಧ್ಯಕ್ಷ ಶ್ರೀಧರ ಗೌಡ ಶ್ರೀಹರಿ ನಡ್ಪ, ಉಪಾಧ್ಯಕ್ಷ ಶಿವರಾಮ ಕಾರಂತ ಉರಾಬೆ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕ ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಲೋಕೇಶ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲ್ಲಾಯ, ಉಪಟ್ರಸ್ಟಿಗಳಾದ ಸುರೇಶ್ ಬಿದಿರಾಡಿ, ಪ್ರಸನ್ನ ಕಾರಂತ್, ಯಾದವ ಗೌಡ, ನೋಣಯ್ಯ ಗೌಡ, ಎಲ್ಯಣ್ಣ ಗೌಡ, ದಿನೇಶ್ ನಡ್ಪ, ಶಿವರಾಮ ಪ್ರಸಾದ್ ಬಜತ್ತೂರು, ಕಿಶೋರ್ ಬಜತ್ತೂರು ಸೇರಿದಂತೆ ಶ್ರೀ ವಿಷ್ಣುಮೂರ್ತಿ ಶಾಶ್ವತ ಮಹಾಸಮಿತಿ, ಶ್ರೀ ವಿಷ್ಣುಮೂರ್ತಿ ಶಾಶ್ವತ ಉಪಸಮಿತಿ, ಶ್ರೀ ವಿಷ್ಣುಮೂರ್ತಿ ಭಜನಾ ಸಂಘ, ಧನುಪೂಜಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರಿನ ಭಗವದ್ಭಕ್ತರು, ಗುತ್ತು ಬಾರಿಕೆಯವರು ಉಪಸ್ಥಿತರಿದ್ದರು.