ಬೊಳ್ಳಾಣ ಗುಡ್ಡೆಗೆ ಬೆಂಕಿ

0

ಪುತ್ತೂರು:ಆರ್ಯಾಪು ಗ್ರಾಮದ ಮಚ್ಚಿಮಲೆ ಶಾಲಾ ಸಮೀಪದ ಬೊಳ್ಳಾಣದಲ್ಲಿ ಖಾಸಗಿ ಒಡೆತನದ ಗುಡ್ಡೆಗೆ ಬೆಂಕಿ ಬಿದ್ದ ಘಟನೆ ಫೆ.16ರಂದು ಸಂಜೆ ನಡೆದಿದೆ.


ಆರ್ಯಾಪು ಗ್ರಾಮದ ಬೊಳ್ಳಾಣದಲ್ಲಿ ಖಾಸಗಿ ಒಡೆತನದಲ್ಲಿರುವ ಗೇರುಬೀಜದ ಗುಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಈ ಕುರಿತು ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಅವರು ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.


ಕಿರಿದಾದ ರಸ್ತೆ ಸುತ್ತಿ ಬಳಸಿ ಬಂದ ಅಗ್ನಿಶಾಮಕ ವಾಹನ:

ಬೊಳ್ಳಾಣ ಗುಡ್ಡೆಯಲ್ಲಿ ಬೆಂಕಿ ತಗುಲಿದ ಮಾಹಿತಿ ಲಭಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರುತ್ತಿದ್ದಾಗ ಅಲ್ಲಿ ರಸ್ತೆ ಕಿರಿದಾದ್ದರಿಂದ ಬೆಂಕಿ ತಗುಲಿದ ಸ್ಥಳಕ್ಕೆ ಕೂಡಲೇ ಹೋಗಲು ಸಾಧ್ಯವಾಗದೆ ಬಲ್ನಾಡು ರಸ್ತೆಯ ಮೂಲಕ ಸುತ್ತಿ ಬಳಸಿ ಬರಬೇಕಾಯಿತು.ಇನ್ನಾದರೂ ಈ ರಸ್ತೆ ಅಗಲೀಕರಣ ಮಾಡುವಂತೆ ಸ್ಥಳೀಯ ಸಾರ್ವಜನಿಕರು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here