ಗ್ರಾ.ಪಂ. ಕಛೇರಿ ಒಳಗೆ ಬಂದು ವೀಡಿಯೋ ಚಿತ್ರೀಕರಿಸಿ ಯೂ ಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿದ ಪ್ರಕರಣ; ಐತ್ತೂರು ಪಿಡಿಓ ಸುಜಾತರವರಿಂದ ದೂರು: ವಿಡಿಯೋ ಡಿಲೀಟ್ ಮಾಡಿದ ಕಡಬ ಠಾಣಾ ಪೊಲೀಸರು

0

ಪುತ್ತೂರು: ಗ್ರಾಮ ಪಂಚಾಯತ್ ಕಛೇರಿ ಒಳಗಡೆ ಬಂದು ವಿಡಿಯೋ ಚಿತ್ರೀಕರಣ ಮಾಡಿ ಯೂ ಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಿರುವ ಕುರಿತು ಪಿಡಿಓ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಯೂ ಟ್ಯೂಬ್ ಚಾನೆಲ್ ನವರನ್ನು ಠಾಣೆಗೆ ಕರೆಸಿ ವಿಡಿಯೋ ದೃಶ್ಯವನ್ನು ಡಿಲೀಟ್ ಮಾಡಿದ ಘಟನೆ ವರದಿಯಾಗಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ಕಛೇರಿ ಒಳಗೆ ಬಂದ ಕಡಬದ ಸಂತೋಷ್ ರೈ ಎಂಬವರು ಪಿಡಿಓ ಸುಜಾತ ಕೆ. ಅವರು ಸಾರ್ವಜನಿಕ ಕರ್ತವ್ಯದಲ್ಲಿದ್ದ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಲ್ಲದೆ ತಮ್ಮ ಯೂ ಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿ ಪಿಡಿಓ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕುರಿತು ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಪಿಡಿಓ ಸುಜಾತ ಅವರು ನೀಡಿದ್ದ ದೂರಿನಂತೆ ಕಡಬದ ಖಾಸಗಿ ಯೂ ಟ್ಯೂಬ್ ಚಾನೆಲ್ಲಿನ ಸಂತೋಷ್ ರೈ ಎಂಬವರನ್ನು ಠಾಣೆಗೆ ಕರೆಸಿದ ಎಸ್.ಐ. ಹರೀಶ್ ಆರ್. ಮತ್ತು ಎ.ಎಸ್.ಐ. ಸುರೇಶ್ ಅವರು ಸಂತೋಷ್ ರೈಯವರನ್ನು ವಿಚಾರಣೆಗೊಳಪಡಿಸಿ ಅವರಿಗೆ ಎಚ್ಚರಿಕೆ ನೀಡಿದರಲ್ಲದೆ ಯೂ ಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದ್ದ ವಿಡಿಯೋ ತುಣಕನ್ನು ಡಿಲಿಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.‌

LEAVE A REPLY

Please enter your comment!
Please enter your name here