ಕಲಾ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳಿಗೆ ಹೆಸರಾಗಿರುವ ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾ ಕೇಂದ್ರ (ರಿ) ಪುತ್ತೂರು ವತಿಯಿಂದ ಗಾನಸಿರಿ ಹಾಡು ಬಾ ಕೋಗಿಲೆ ಎಂಬ ವಿನೂತನ ಶೈಲಿಯ ಮ್ಯೂಸಿಕಲ್ ರಿಯಾಲಿಟಿ ಶೋ ಫೆ.19ರಂದು ಬೆಳಿಗ್ಗೆ 9.00 ರಿಂದ ರಾತ್ರಿ 9.00 ರವರೆಗೆ ಪುತ್ತೂರಿನ ಶಿವರಾಮ ಕಾರಂತರ ಬಾಲವನದ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಪ್ರಸ್ತುತ ವರ್ಷ ಗಾನಸಿರಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ 600 ವಿದ್ಯಾರ್ಥಿಗಳಲ್ಲಿ ಆಯ್ದ 300 ವಿದ್ಯಾರ್ಥಿಗಳು ವಿವಿಧ ತಂಡಗಳಾಗಿ ತಲಾ 55 ನಿಮಿಷಗಳ ಕಾಲ ಪ್ರಸ್ತುತ ಪಡಿಸುವ ಸಂಗೀತ ವೈವಿಧ್ಯ ಕಾರ್ಯಕ್ರಮ ಇದಾಗಿದ್ದು ಆಯ್ಕೆಯಾದ 4 ತಂಡಗಳು ರಾತ್ರಿ 8.00 ಕ್ಕೆ ನಡೆಯುವ ವಿಶೇಷವಾದ ಚುಟುಕು ಫೈನಲ್ ನಲ್ಲಿ ಭಾಗವಹಿಸಲಿದೆ.
ಕಾರ್ಯಕ್ರಮವನ್ನು ಮಾನ್ಯ ಸಹಾಯಕ ಆಯುಕ್ತರು ಗಿರೀಶ್ ನಂದನ್ ಉದ್ಘಾಟಿಸಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಉದ್ಯಮಿ ಕರುಣಾಕರ್ ರೈ, ಖ್ಯಾತ ವಕೀಲರಾದ ನವೀನ್ ಬನ್ನಿಂತಾಯ ಮಂಗಳೂರು, ನಗರ ಸಭೆ ಸದಸ್ಯರಾದ ದೀಕ್ಷಾ ಪೈ, ಭಜರಂಗದಳ ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ ಮತ್ತು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ಸಹಿತ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಗಾನಸಿರಿ ಪ್ರಕಟಣೆ ತಿಳಿಸಿದೆ…