ನೆಲ್ಯಾಡಿ-ಕೋಲ್ಪೆ ಮಖಾಂ ಉರೂಸ್, ಮತಪ್ರಭಾಷಣ

0

ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆ ಸೈಯ್ಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾ ಶರೀಫ್‌ನಲ್ಲಿ ನಡೆಯುತ್ತಿರುವ ’ಕೋಲ್ಪೆ ಮಖಾಂ ಉರೂಸ್’ ಪ್ರಯುಕ್ತ ಫೆ.17ರಂದು ರಾತ್ರಿ ಮತ ಪ್ರಭಾಷಣ ನಡೆಯಿತು.

ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಅವರು ಮುಖ್ಯಪ್ರಭಾಷಣ ನೀಡಿದರು. ಕೋಲ್ಪೆ ನೂರಾನಿಯ ಮದರಸ ಮುಖ್ಯಗುರು ಯುಸೂಫ್ ಮುಸ್ಲಿಯಾರ್ ದು:ವಾ ನೆರವೇರಿಸಿದರು. ಕೋಲ್ಪೆ ಬಿಜೆಎಂ ಉಪಾಧ್ಯಕ್ಷ ಅಬ್ದುಲ್ಲಾ ಕುಂಞಿ ಕೊಂಕೋಡಿ ಅಧ್ಯಕ್ಷತೆ ವಹಿಸಿದ್ದರು.

ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್, ಉಪ್ಪಿನಂಗಡಿ ಜುಮಾ ಮಸೀದಿ ಖತೀಬರಾದ ಅಬ್ದುಲ್ ಸಲಾಮ್ ಫೈಝಿ ಎಡಪ್ಪಾಲ್, ಕೊಕ್ಕಡ ಬಿಜೆಎಂ ಖತೀಬರಾದ ಅಬ್ದುಲ ಸಮದ್ ಬಾಖವಿ, ಕುಂಡಾಜೆ ಜುಮಾ ಮಸೀದಿ ಅಧ್ಯಕ್ಷ ಶಾಹುಲ್ ಹಮೀದ್, ಖತೀಬರಾದ ಮುನೀರ್ ಅನ್ವರಿ, ಎಸ್‌ಕೆಎಸ್‌ಎಸ್‌ಎಫ್ ಕೊಚ್ಚಿಲ ಶಾಖೆ ಅಧ್ಯಕ್ಷ ಹಾರಿಸ್ ಪಿ.ಎಸ್., ಆತೂರು ಬಿಜೆಎಂ ಸದ್ಯ ಸಿ.ಕೆ.ಸಿದ್ದೀಕ್ ಕುಂಡಾಜೆ ಮತ್ತಿತರರು ಉಪಸ್ಥಿತರಿದ್ದರು.

ಕೋಲ್ಪೆ ಬಿಜೆಎಂ ಕಾರ್ಯದರ್ಶಿ ಶಮೀರ್ ಅರ್ಶದಿ ಸ್ವಾಗತಿಸಿ, ರಂಝಾನ್ ಸಾಹೇಬ್ ವಂದಿಸಿದರು. ಕೆ.ಎಸ್.ಶರೀಫ್ ಕಾರ್ಯಕ್ರಮ ನಿರೂಪಿಸಿದರು. ಕೋಲ್ಪೆ ಬಿಜೆಎಂ, ಗೋಳಿತ್ತೊಟ್ಟು ರಹ್ಮಾನಿಯಾ ಜುಮಾ ಮಸೀದಿ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಹಾಗೂ ಗೋಳಿತ್ತೊಟ್ಟು ಶಾಖೆಯ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here