ಫೆ.26 ಕ್ಕೆ ಜನ ಸಂವಾದ ಕರ್ನಾಟಕದ ಇಂದಿನ ಅಗತ್ಯಗಳ ಕುರಿತು ವಿಷಯ ಮಂಡನೆ, ಸಂವಾದ

0

ಪುತ್ತೂರು: ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಮಂಗಳೂರು ಜಂಟಿಯಾಗಿ ಆಯೋಜಿಸಿರುವ ಜನ ಸಂವಾದ ಕಾರ್ಯಕ್ರಮ ಫೆ.26 ರಂದು ಪುತ್ತೂರು ಜೈನ ಭವನದಲ್ಲಿ ಬೆಳಿಗ್ಗೆ ಗಂ.10 ರಿಂದ ಮಧ್ಯಾಹ್ನ ತನಕ ನಡೆಯಲಿದ್ದು, ಕರ್ನಾಟಕದ ಇಂದಿನ ಅಗತ್ಯಗಳ ಕುರಿತು ವಿಷಯ ಮಂಡನೆ ಸಂವಾದ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಗಾಂಧಿ ವಿಚಾರ ವೇದಿಕೆ ರಾಜ್ಯ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಮತ್ತು ಪುತ್ತೂರು ಘಟಕದ ಅಧ್ಯಕ್ಷ ಝೇವಿಯರ್ ಡಿ ಸೋಜ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಕೃತಿಯ ಜೊತೆಯಲ್ಲಿ ಅಭಿವೃದ್ದಿ, ಸಮಾಜದ ಸ್ಥಿತಿಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು, ಸಾಮರಸ್ಯದ ಕಲ್ಪಣೆಯ ಉದ್ದೇಶವಿಟ್ಟುಕೊಂಡು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣದ ಹಿನ್ನಲೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಗಾಂಧೀಜಿಯ ಆಶಯಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದ ಅವರು ಸಂವಾದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನಿವೃತ್ತ ಜಸ್ಟೀಸ್ ಎನ್ ಸಂತೋಷ್ ಹೆಗ್ಡೆ ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತ ಕುರಿತು ಮಾತನಾಡಲಿದ್ದಾರೆ.

ಪತ್ರಕರ್ತ ಬಿ.ಎಂ ಹನೀಫ್ ಸಾಮಾಜಿಕ ಅಗತ್ಯಗಳ ಕುರಿತು ಮಾತನಾಡಲಿದ್ದಾರೆ. ಗಾಂಧಿ ವಿಚಾರ ವೇದಿಕೆ ವ್ಯವಸ್ಥಾಪಕ ಸದಸ್ಯ ಎನ್. ಎಂ ಬಿರಾದಾರ ಅವರು ಯುವಜನತೆಯ ಅಗತ್ಯಗಳ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿಂತಕ ವಿಲ್ ಫ್ರೆಡ್ ಡಿ ಸೋಜಾ, ಗಾಂಧಿ ವಿಚಾರ ವೇದಿಕೆ ರಾಜ್ಯ ಅಧ್ಯಕ್ಷ ಶ್ರೀಧರ್ ಭಿಡೆ, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ ಸದಾನಂದ ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಂವಾದಕ್ಕೆ ಮುಕ್ತ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here