ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ವಿಜ್ರಂಭಣೆಯ ನೇಮೋತ್ಸವ, ಅನ್ನಸಂತರ್ಪಣೆ

0

ಪುತ್ತೂರು: ಕುರಿಯ ಗ್ರಾಮದ ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಏಳ್ನಾಡುಗುತ್ತು ದೈವ ಶ್ರೀ ವ್ಯಾಘ್ರ ಚಾಮುಂಡಿ, ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.21 ರಂದು ಆರಂಭಗೊಂಡಿದ್ದು ಫೆ.23 ರಂದು ಮುಕ್ತಾಯಗೊಳ್ಳಲಿದೆ. ಫೆ.2 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ದುರ್ಗಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ವೆಂಕಟ್ರಮಣ ದೇವರ ಹರಿಸೇವೆ ನಡೆದು ಪ್ರಸಾದ ವಿತರಣೆ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಗುರುಹಿರಿಯರಿಗೆ ಸಂತೃಪ್ತಿ ಬಳಿಕ ವ್ಯಾಘ್ರ ಚಾಮುಂಡಿ ದೈವದ ನೇಮ ನಡೆಯಿತು. ಫೆ.22 ರಂದು ಬೆಳಿಗ್ಗೆ ವರ್ಣರ ಪಂಜುರ್ಲಿ ನೇಮ, ಶಗ್ರಿತ್ತಾಯ ಪಂಜುರ್ಲಿ ನೇಮ ನಡೆದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಶಕ್ತಿ ಮಹಮ್ಮಾಯಿ ಪೂಜೆ, ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದು ಬಳಿಕ ಜೋಡು ಕಲ್ಲುರ್ಟಿ ನೇಮ, ಕೊರತಿ ದೈವದ ನೇಮ ನಡೆಯಿತು. ಏಳ್ನಾಡುಗುತ್ತು ತರವಾಡು ಕುಟುಂಬಸ್ಥರು ಸೇರಿದಂತೆ ಊರಪರವೂರ ನೂರಾರು ಭಕ್ತರು ಆಗಮಿಸಿ ಶ್ರೀ ದೈವದ ಗಂಧಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು.

ಏಳ್ನಾಡುಗುತ್ತು ತರವಾಡು ಮನೆಯ ಯಜಮಾನರಾದ ಕೆ.ಎಂ.ವಿಶ್ವನಾಥ ರೈ ಮಾಡಾವು ಕುರಿಯ ಏಳ್ನಾಡುಗುತ್ತು, ಕೆ.ಸೀತಾರಾಮ ರೈ ಕುರಿಯ ಏಳ್ನಾಡುಗುತ್ತು, ಕೆ.ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಎಸ್.ಬಿ.ಜಯರಾಮ ರೈ ಬಳಜ್ಜ ಕುರಿಯ ಏಳ್ನಾಡುಗುತ್ತು ಹಾಗೂ ಕುರಿಯ ಮಾಡಾವು ಏಳ್ನಾಡುಗುತ್ತು ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

ಇಂದು ತರವಾಡು ಮನೆಯಲ್ಲಿ

ಫೆ.23 ರಂದು ಬೆಳಿಗ್ಗೆ ಶಿರಾಡಿ ಮತ್ತು ಮಲರಾಯ ದೈವದ ನೇಮ, ಮಧ್ಯಾಹ್ನ ಧರ್ಮದೈವ ಧೂಮಾವತಿ ದೈವದ ನೇಮ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀ ಗುಳಿಗ ದೈವದ ನೇಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಗಂಧಪ್ರಸಾಧ, ಅನ್ನಪ್ರಸಾದ ಸ್ವೀಕರಿಸುವಂತೆ ತರವಾಡು ಮನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here