ಮಿತ್ರಂಪಾಡಿ ಜಯರಾಮ್ ರೈ ಅವರಿಗೆ ಗಡಿನಾಡ ದ್ವನಿ ಸದ್ಭಾವನಾ ಭೂಷಣ ರಾಷ್ಟ್ರೀಯ ಪ್ರಶಸ್ತಿ

0

ಪುತ್ತೂರು: 2022ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತ್ಯ ಮಹಾಪೋಷಕರಾದ ಮಿತ್ರಂಪಾಡಿ ಜಯರಾಮ್ ರೈ ಅವರು ಕರಾವಳಿಯ ಪ್ರತಿಷ್ಠಿತ ಗಡಿನಾಡ ಧ್ವನಿ ಸದ್ಭಾವನಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಇನ್ನಿತರ ಸಂಘಗಳ ಸಹಕಾರದಲ್ಲಿ ಫೆಬ್ರವರಿ 25ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಡ್ಯದಲ್ಲಿ ಹಿರಿಯ ಸಾಹಿತಿಗಳಾಗಿರುವ ಮಲಾರು ಜಯರಾಮ ರೈ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ 6ನೇ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ

ಮಿತ್ರoಪಾಡಿ ಜಯರಾಮ ರೈ ಅವರು ಕೊರೋನಾ ಸಂದರ್ಭದಲ್ಲಿ ನೂರಾರು ಮನೆಗಳಿಗೆ ಕೊರೋನ ಕಿಟ್ ವಿತರಿಸುವುದರ ಜೊತೆಗೆ ಜಾತ್ರಾ ಸಮಯದಲ್ಲಿ ಲಾಕ್ ಡೌನ್ ಗೆ ಸಿಲುಕಿದ ಜಾಯಿಂಟ್ ವೀಲ್ ಕುಟುಂಬದ ಸುಮಾರು 60 ಸದಸ್ಯರಿಗೆ ಒಂದು ತಿಂಗಳು ಆಹಾರ ಪೂರೈಸುವುದರ ಜೊತೆಗೆ ಲಾಕ್ ಡೌನ್ ಸಮಯದಲ್ಲಿ ವಿದೇಶದಲ್ಲಿ ಸಿಲುಕಿದ ಅನೇಕರಿಗೆ ತಾಯ್ನಾಡಿಗೆ ಮರಳಲು ಸಹಾಯ ಮಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ನಡೆಯುವ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ಪುತ್ತೂರು ತಾಲೂಕಿನ 32 ಗ್ರಾಮದಲ್ಲಿ ನಡೆಸುವ ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾಗಿಯೂ ಕನ್ನಡಾಂಬೆಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ನೂರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ನೀಡುವುದರ ಜೊತೆಗೆ ಹತ್ತು ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಉದ್ಯೋಗ ನಿಮಿತ್ತ ದೂರದ ಗಲ್ಫ್ ರಾಷ್ಟ್ರದ ಅಬುದಾಬಿಯಲ್ಲಿದ್ದರೂ ಸದಾ ತಾಯ್ನಾಡಿನ ನೆಲ, ಜಲ,ನಾಡು,ನುಡಿ, ಸಂಸ್ಕೃತಿ ಆಚಾರ ವಿಚಾರಗಳಿಗೆ ಸದಾ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here