ಪುತ್ತೂರು: ಕೆದಂಬಾಡಿ ಗ್ರಾಮದ ಕಟ್ಟತ್ತಾರು ನಿಡ್ಯಾಣಕ್ಕೆ ಹೋಗುವ ರಸ್ತೆಯನ್ನು 1 ಕೀ.ಮೀ ಮುಖ್ಯರಸ್ತೆ ಕಾಂಕ್ರಿಟೀಕರಣ ಮಾಡಿಕೊಡುವಂತೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಅನುದಾನ ಬಂದಾಗ ಮಾಡುತ್ತೇವೆ ಎಂದು ಭರವಸೆ ನೀಡುತ್ತಾ ಬಂದಿದ್ದು ಇದರಿಂದ ಆಕ್ರೋಶಗೊಂಡು ನಿಡ್ಯಾಣ ಭಾಗದ ರಸ್ತೆ ಫಲಾನುಭವಿನಗಳು ರಸ್ತೆ ಕಾಂಕ್ರೀಟೀಕರಣಕ್ಕೆ ಆಗ್ರಹಿಸಿ ಫೆ.23 ರಂದು ಸಂಜೆ ಸಾಂಕೇತಿಕ ಪ್ರತಿಭಟನೆ ನಡೆಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದಾರೆ.
ಈ ರಸ್ತೆಯು ಕೆದಂಬಾಡಿ ಹಾಗೂ ಅರಿಯಡ್ಕ ಗ್ರಾಮಕ್ಕೆ ಒಳಪಟ್ಟ ಹಲವು ಮನೆಗಳಿಗೆ ಸಂಪರ್ಕ ರಸ್ತೆಯಾಗಿದ್ದು ಮುಖ್ಯರಸ್ತೆಯಿಂದ 1 ಕಿ.ಮೀ ತನಕ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಗಾಲದಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾಪಂ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಗ್ರಾಮಸ್ಥರ ಬೇಡಿಕೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ರಸ್ತೆ 1 ಕಿ.ಮೀ ಕಾಂಕ್ರೀಟೀಕರಣವಾಗುವ ತನಕ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಸ್ತೆ ಫಲಾನುಭವಿಗಳಾದ ರೇಖಾ ರೈ, ಮೆಲ್ವಿನ್ ಮೊಂತೆರೋ, ಹಸೈನಾರ್ ಬಿ.ಕೆ, ಶಾಕಿರ್ ಎನ್, ಭಾಸ್ಕರ ಸವಿತಾ ಪೂಜಾರಿ, ಯತೀಶ್, ನಾರಾಯಾಣ, ಸಂಜೀವ ರೈ, ಅಶ್ರಫ್ ಎ.ಕೆ, ನಿಝಾರ್, ಫೈಜಲ್, ನಾಸಿರ್, ಅಸಿಮ್, ಸರ್ಫ್‌ರಾಝ್, ಸುಂದರ ಆಚಾರಿ, ಸಾದಿಕ್, ಕರೀಮ್ ನಿಡ್ಯಾಣ, ಅಬ್ಬಾಸ್ ಮೇಸ್ತ್ರೀ, ಅಬೂಬಕ್ಕರ್ ನಿಡ್ಯಾಣ, ಫವಾಜ್ ನಿಡ್ಯಾಣ, ನಾಸಿರ್ ನಿಡ್ಯಾಣ, ಕಬೀರ್, ಸಮದ್, ಅಮೀರ್, ಝಾಕಿರ್, ಸಿದ್ಧಿಕ್, ಶಾಫಿ, ಮಜೀದ್, ರಝಾಕ್ ಎ.ಕೆ, ಹರಿಪ್ರಸಾದ್ ರೈ, ಶೇಖಾಲಿ, ದಿವಾಕರ ರೈ, ಹರಿಣಾಕ್ಷಿ,ನವೀದ್, ಇಸ್ಮಾಯಿಲ್, ಅಬ್ದುಲ್ ಖಾದರ್, ರಝೀಯ , ಅಬ್ದುಲ್ ರಝಾಕ್, ಶಫಿಯ, ಫವಾಜ್, ಝೋಹರಾ, ರಫೀಕ್, ಶೈನಾ, ಉನೈಬ, ಮುನ್‌ಸಿನ್, ಅಸ್ಮಾ, ಝೈನಬ, ಜಯರಾಮ ಎನ್, ದೀಕ್ಷಾ, ರತ್ನಾವತಿ, ಯಶೋಧರ, ಜಯಂತಿ, ದುಲೈಕಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.