ಪುತ್ತೂರು; ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿ ಈ ವರ್ಷಕ್ಕೆ 90 ವರ್ಷ ಪೂರೈಸುವ ಸಂಭ್ರಮದಲ್ಲಿ ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮಗಳು ಆಯೋಜಿಸಿಕೊಳ್ಳಲಾಗಿದ್ದು ಈ ಕಾರ್ಯಕ್ರಮಗಳಿಗೆ ಫೆ.26ರಂದು ಚಾಲನೆ ದೊರೆಯಿತು.
ಗಾಂಧೀ ಕಟ್ಟೆ, ಗಾಂಧೀಜಿ ವಿಚಾರ ವೇದಿಕೆ ಪುತ್ತೂರು ಹಾಗೂ ಮಹಾತ್ಮ ಗಾಂಧೀಜಿ ಶಾಂತಿ ಪ್ರತಿಷ್ಠಾನದ ಸಹಯೋಗದಲ್ಲಿ ಒಂದು ನಿರಂತರ ಕಾರ್ಯಕ್ರಮ ನಡೆಯಲಿರುವ ಕಾರ್ಯಕ್ರಮಗಳಿಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯ ಚಂದ್ರ, ಗಾಂಧೀ ವಿಚಾರ ವೇದಿಕೆ ಅಧ್ಯಕ್ಷ ಕ್ಸೇವಿಯರ್ ಡಿ ಸೋಜ, ಶ್ರೀಧರ ಬಿಡೆ, ನ್ಯಾಯವಾದಿ ಜಗನ್ನಿವಾಸರಾವ್, ಗಾಂಧೀ ಕಟ್ಟೆ ಸಮಿತಿಯ ಸಯ್ಯದ್ ಕಮಲ್ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ರಮೇಶ್ ಬಾಬು ವಂದಿಸಿದರು.