ಪುತ್ತೂರು: ಹೆರಿಗೆಗೆಂದು ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಗರ್ಭಿಣಿಯೋರ್ವಳು 108 ಆಂಬ್ಯುಲೆನ್ಸ್‌ನಲ್ಲಿ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿರುವ ಘಟನೆ ಫೆ.23ರಂದು ಸಂಜೆ ನಡೆದಿದೆ.
ಮಾಣಿ ನಿವಾಸಿ ನೂರುನ್ನೀಸಾ ಹೆರಿಗೆಗೆಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲು ೧೦೮ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಈ ಮಧ್ಯೆ ಆಂಬ್ಯುಲೆನ್ಸ್ ಕಲ್ಲಡ್ಕ ತಲುಪುವ ವೇಳೆಗೆ ಅವರು ಮಗುವಿಗೆ ಸುರಕ್ಷಿತವಾಗಿ ಜನ್ಮನೀಡಿದ್ದಾರೆ. ಆಂಬ್ಯುಲೆನ್ಸ್ ಸಿಬಂದಿ ಮನೋಹರ್ ಹಾಗೂ ಚಾಲಕ ಕರುಣಾಕರ ಆಂಬ್ಯುಲೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.