ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ, ದರ್ಶನ ಬಲಿ ಉತ್ಸವ

0

ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿಯ ಜಾತ್ರೆ ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಅವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.


ಸಂಜೆ ಶ್ರೀ ದೇವರ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಾವಿರಾರು ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದರು ಕೊನೆಯಲ್ಲಿ ಅನ್ನ ಪ್ರಸಾದ ವಿತರಣೆ ನಡೆಯಿತು.


ದೇವಸ್ಥನಾದ ಧರ್ಮದರ್ಶಿ ರಾಜಣ್ಣ, ಅಧ್ಯಕ್ಷ ಲೋಕೇಶ ಹೆಗ್ಡೆ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಮಲ, ಪ್ರಧಾನ ಕಾರ್ಯದರ್ಶಿ ದಿನಕರ ಗೌಡಬುಡ್ಲೆಗುತ್ತು, ಗಣೇಶ ಕರ್ಮಲ, ಮಹಾಲಿಂಗ ಪಾಟಾಳಿ, ಕೃಷ್ಣಪ್ಪ ಗೌಡ , ದಿನೇಶ್ ಕರ್ಮಲ, ಕೃಷ್ಣಪ್ಪ ಕರ್ಮಲ, ತಾರಾನಾಥ, ಚಂದ್ರಯ್ಯ ಮೊದಲಾದವರು ಜಾತ್ರೆಯ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕರಿಸಿದರು. ಜಾತ್ರೆಯ ಸಂದರ್ಭದಲ್ಲಿ ದಿ.ಚಿದಾನಂದ ಕಾಮತ್‌ರ ಬಾರಿಸು ಕನ್ನಡ ಡಿಂಡಿಮವ ತಂಡದವರಿಂದ ಮತ್ತು ಸಂಗಮ್ ಬ್ರದರ್ಸ್, ನಮ್ಮೂರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here