ಪುತ್ತೂರು:ಗೂಡಂಗಡಿಗೆ ಅಬಕಾರಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದ ಘಟನೆ ಫೆ.27ರಂದು ಮುರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮುರ ಹಳೆಯ ರೈಲ್ವೇ ಗೇಟ್ ಬಳಿಯಲ್ಲಿರುವ ಗೂಡಂಗಡಿಯೊಂದಕ್ಕೆ ಅಬಕಾರಿ ಇಲಾಖೆ ದಾಳಿ ನಡೆಸಿ ಅಂಗಡಿಯನ್ನು ತಪಾಸಣೆ ನಡೆಸಿದಾಗ ಮದ್ಯ ತುಂಬಿದ ಬಾಟಲಿ ಪತ್ತೆಯಾಗಿದೆ.
ಆದರೆ ಕಾನೂನು ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಅಧಿಕ ಪ್ರಮಾಣದ ಮದ್ಯ ಇರದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.