ನೆಲ್ಯಾಡಿ: ಮಧ್ಯಪ್ರದೇಶದ ಇಂದೋರ್ನಲ್ಲಿ ಫೆ.15ರಿಂದ 19ರ ತನಕ ನಡೆದ ವಿಶೇಷ ಚೇತನ ಮಕ್ಕಳ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಡಬ ತಾಲೂಕಿನ ಇಚ್ಲಂಪಾಡಿಯ ನಿಕ್ಷಿತ್ ಡಿ.ಕೆ. ಅವರು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಎನ್.ಕೆ ಗಣಪಯ್ಯ ರೋಟರಿ ಶ್ರವಣ ದೋಷವುಳ್ಳ ಮಕ್ಕಳ ಶಾಲೆ ಸಕಲೇಶಪುರ ಇಲ್ಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿರುವ ನಿಕ್ಷಿತ್ರವರು ಇಚ್ಲಂಪಾಡಿ ಗ್ರಾಮದ ಕೆರ್ನಡ್ಕ ನಿವಾಸಿ ಧನಂಜಯ ಗೌಡ ಹಾಗೂ ರೂಪ ದಂಪತಿಯ ಪುತ್ರ.