ಪುಣ್ಚಪ್ಪಾಡಿ ಕುದ್ರೋಳಿಮಾಡ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಕೃತಜ್ಞತಾ ಸಭೆ

0

ಪುತ್ತೂರು: ಫೆ.21 ರಿಂದ 23 ರತನಕ ನಡೆದ ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿಭೂತ, ಕುಕ್ಕಳ ಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕೃತಜ್ಞತಾ ಸಭೆಯು ಫೆ. 26 ರಂದು ದೈವಸ್ಥಾನದ ವಠಾರದಲ್ಲಿ ಜರಗಿತು.

ಮತ್ತಷ್ಟು ಅಭಿವೃದ್ಧಿ ಕಾಣಲಿ- ಎ.ಕೃಷ್ಣ ರೈ
ಸಭೆಯ ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ.ಕೃಷ್ಣ ರೈ ತಳಮನೆ ಪುಣ್ಚಪ್ಪಾಡಿರವರು ಮಾತನಾಡಿ ದೈವಸ್ಥಾನದ ಜೀರ್ಣೋದ್ಧಾರ ಕಾರ‍್ಯದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯ ತುಂಬಿದ ಅಭಿನಂದನೆಗಳು. ಒಂದು ವರ್ಷದ ಅವಧಿಯಲ್ಲಿ ಸುಂದರವಾದ ದೈವಸ್ಥಾನ ನಿರ್ಮಾಣ ಮಾಡಬೇಕಿದ್ದರೆ ಇದರ ಹಿಂದೆ ಅವಿರತವಾಗಿ ಶ್ರಮಿಸಿದ ಹರೀಶ್ ತೋಟದಡ್ಕ, ಗಿರಿಶಂಕರ್ ಸುಲಾಯ ಸೇರಿದಂತೆ ಅನೇಕ ಮಂದಿ ಊರವರ ಸಹಕಾರ ಪ್ರೋತ್ಸಾಹವನ್ನು ಸದಾ ಗೌರವಿಸಬೇಕಿದೆ ಎಂದು ಹೇಳಿ, ಮುಂದೆಯೂ ಈ ದೈವಸ್ಥಾನ ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಹಾರೈಸಿದರು.

ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಕಾರ‍್ಯಕ್ಕೆ ಸಹಕಾರ ಬೇಕು- ಗಣೇಶ್ ನಿಡ್ವಣ್ಣಾಯ
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲರವರು ಮಾತನಾಡಿ ಪುಣ್ಚಪ್ಪಾಡಿ ಕುದ್ರೋಳಿಮಾಡ ದೈವಸ್ಥಾನ ಸುಂದರವಾಗಿ ನಿರ್ಮಾಣವಾಗಿದೆ ಇದು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ 500 ವರ್ಷಗಳ ಇತಿಹಾಸವನ್ನು ಹೊಂದಿರುವ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ದಾರ ಕಾರ‍್ಯದಲ್ಲಿ ಊರವರು ಮುಂದೆ ಬಂದಲ್ಲಿ ತಾನು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಸ್ಯರವರು ಮಾತನಾಡಿ ದೈವಸ್ಥಾನ ಜೀರ್ಣೋದ್ದಾರ ಕಾರ‍್ಯ ಸಾಂಗವಾಗಿ ನಡೆದು ಸಂಭ್ರಮದಿಂದ ಬ್ರಹ್ಮಕಲಶೋತ್ಸವ ನೆರವೇರುವ ಮೂಲಕ ಗ್ರಾಮಕ್ಕೆ ಒಳ್ಳೆಯ ಹೆಸರು ಬಂದಿದೆ ಎಂದರು.

ಹತ್ತೂರಲ್ಲಿ ಹೆಸರು- ಗಾಂಭೀರ
ಡಿ.ಎಲ್.ಗಾಂಭೀರ ದೇವಸ್ಯರವರು ಮಾತನಾಡಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಹತ್ತೂರಲ್ಲಿ ಹೆಸರನ್ನು ಪಡೆದಿದೆ ಎಂದರು.

ಅಚ್ಚುಕಟ್ಟಾಗಿ ನಿರ್ಮಾಣ- ಪದ್ಮಾಕ್ಷಿ ರೈ
ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವ ಸಲಹೆಗಾರರಾದ ಪದ್ಮಾಕ್ಷಿ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆರವರು ಮಾತನಾಡಿ ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ದೈವಸ್ಥಾನ ನಿರ್ಮಾಣಗೊಂಡು, ಬ್ರಹ್ಮಕಲಶೋತ್ಸವ ನಡೆದಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ದೈವಸ್ಥಾನದ ಸ್ಥಳದಾನಿ ರಾಜೇಶ್ ನಾಯಕ್ ಬೆಂಗಳೂರು, ಪುಣ್ಚಪ್ಪಾಡಿ ತಳಮನೆಯ ಯಜಮಾನ ಬಾಲಕೃಷ್ಣ ರೈ, ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ರೈ ತೋಟದಡ್ಕ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಬಾಲಕೃಷ್ಣ ಗೌಡ ಬೆದ್ರಂಪಾಡಿ, ಉಪಕಾರ‍್ಯದರ್ಶಿ ರಾಮ್ ಮೋಹನ್ ರೈ ಕಲಾಯಿ, ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಉಪಾದ್ಯಕ್ಷ ರಾಜಾರಾಮ್ ರೈ ಕಲಾಯಿ, ವಿಶ್ವನಾಥ್ ಮಡಿವಾಳ, ನಾಗೇಶ್ ಬದಿಯಡ್ಕ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು.

ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ‍್ಯದರ್ಶಿ ಹರೀಶ್ ತೋಟದಡ್ಕ ಸ್ವಾಗತಿಸಿ, ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಕಾರ‍್ಯದರ್ಶಿ ಗಿರಿಶಂಕರ್ ಸುಲಾಯ ದೇವಸ್ಯ ಕಾರ‍್ಯಕ್ರಮ ನಿರೂಪಿಸಿದರು.

ಸಂತಾಪ ಸೂಚಿಸಿ, ಮೌನ ಪ್ರಾರ್ಥನೆ
ಫೆ. 19 ರಂದು ನಿಧನರಾದ ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಸದಸ್ಯ ನಾರ್ಣಪ್ಪ ನಾಯ್ಕ ಜರಿನಾರುರವರಿಗೆ ಸಭೆಯಲ್ಲಿ ಸಂತಾಪ ಸೂಚಿಸಿ, ಮೌನಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here