ನೆಲ್ಯಾಡಿ: ಬಜತ್ತೂರು ಗ್ರಾಮ ಪಂಚಾಯತ್‌ನ 2023ನೇ ಸಾಲಿನ ಫೆಬ್ರವರಿ ತಿಂಗಳ ಸಾಮಾನ್ಯ ಸಭೆ ಫೆ.20ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಬಿ.ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದ್ರಿ ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ವಳಾಲು-ಅಯೋಧ್ಯಾನಗರ ರಸ್ತೆಯ ಗುಂಪಲಕೋಡಿ ಎಂಬಲ್ಲಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಅಡಚಣೆಯಾಗಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಲು ಮೆಸ್ಕಾಂಗೆ ಬರೆಯಲು ನಿರ್ಣಯಿಸಲಾಯಿತು. ಬಜತ್ತೂರು ಗ್ರಾಮದ ವಳಾಲುನಲ್ಲಿ ಮೆಸ್ಕಾಂ ಸಬ್‌ಡಿವಿಜನ್ ಕಚೇರಿ ಮಂಜೂರು ಮಾಡುವಂತೆ ಕೋರಲು ನಿರ್ಣಯಿಸಲಾಯಿತು.
ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಗಂಗಾಧರ ಕೆ.ಎಸ್., ಮೋನಪ್ಪ ಗೌಡ, ಉಮೇಶ್ ಓಡ್ರಪಾಲು, ಗಂಗಾಧರ ಗೌಡ ಪಿ.ಎನ್., ಸಂತೋಷ್‌ಕುಮಾರ್ ಪಿ., ನಝೀರ್ ಬೆದ್ರೋಡಿ, ಮಾಧವ ಪೂಜಾರಿ, ಪ್ರೆಸಿಲ್ಲಾ ಡಿ.ಸೋಜ, ರತ್ನ, ಅರ್ಪಿತ ರೈ, ಯಶೋಧ, ವಿಮಲ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್‌ರವರು ಸಾರ್ವಜನಿಕರಿಂದ ಬಂದ ಅರ್ಜಿಗಳ ಬಗ್ಗೆ ಹಾಗೂ ಸರಕಾರದ ಸುತ್ತೋಲೆಗಳನ್ನು ಸಭೆಗೆ ತಿಳಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ಸ್ವಾಗತಿಸಿದರು.