ಕಾಣಿಯೂರು: ಕಡಬ ತಾಲೂಕಿನ ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿಯ ವತಿಯಿಂದ ನಡೆದಿರುವ ಪ್ರಗತಿ, ಸಾಧನೆಗಳನ್ನು ಗುರುತಿಸಿ ಕಡಬ ತಾಲೂಕಿನಲ್ಲಿ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಫೆ.28ರಂದು ಮಾಣಿ ನೇರಳಕಟ್ಟೆ ಜನಪ್ರೀಯ ಗಾರ್ಡನ್‌ನಲ್ಲಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ ದ.ಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಸಹಯೋಗದಲ್ಲಿ ಎಸ್‌ಡಿಎಂಸಿಯ 21ನೇ ವರ್ಷಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ದ.ಕ ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ದಲಾರಿ ಅವರು ಗಣ್ಯರಿಂದ ಅಭಿನಂದನೆ ಸ್ವೀಕರಿಸಿದರು.
ಶಾಲೆಯಲ್ಲಿ ನಿರಂತರ ಶಾಲಾ ಎಸ್‌ಡಿಎಂಸಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಆಧಾರ್ ಕಾರ್ಡ್ ಪರಿಷ್ಕರಣೆ ಕಾರ್ಯಕ್ರಮದಂತಹ ಹಲವಾರು ಕಾರ್ಯಕ್ರಮಗಳ ಜೊತೆಗೆ ಶಾಲಾಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಶ್ತಸಿ ನೀಡಿ ಗೌರವಿಸಲಾಗಿದೆ. ಎಸ್‌ಡಿಎಂಸಿ ಉಪಾಧ್ಯಕ್ಷೆ ಕುಸುಮಾವತಿ ಕಳ, ಸದಸ್ಯರಾದ ಪುರಂದರ ಅಂಬುಲ, ದಿನೇಶ್ ಕುಕ್ಕುನಡ್ಕ, ಆನಂದ ಖಂಡಿಗ, ಆನಂದ ಉದ್ಲಡ್ಡ, ಧರ್ಮಪಾಲ ಅಂಬುಲ, ವಿಜಯ ಅಂಬುಲ, ಬಾಲಕಿ ಕಳ, ದಾಮೋದರ ಖಂಡಿಗ, ಜಯಂತಿ ಮದುವ, ವಸಂತಿ ಅಬಿಕಾರ ಮತ್ತಿತರರು ಉಪಸ್ಥಿತರಿದ್ದರು.
ನಾಣಿಲ ಸ.ಹಿ.ಪ್ರಾ.ಶಾಲೆಯಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಶಾಲಾ ಮೇಲಸ್ತುವರಿ ಸಮಿತಿ ವತಿಯಿಂದ ಹಮ್ಮಿಕೊಂಡು ಬರಲಾಗುತ್ತಿದ್ದು, ಜೊತೆಗೆ ಶಾಲೆಯ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಶ್ತಸಿ ನೀಡಿ ಗೌರವಿಸಲಾಗಿದೆ. ಶಾಲಾ ಪ್ರಗತಿಯನ್ನು ಪರಿಗಣಿಸಿ ತಾಲೂಕಿನಲ್ಲಿ ಅತ್ಯುತ್ತಮ ಎಸ್‌ಡಿಎಂಸಿ ಎಂದು ಗುರುತಿಸಿರುವುದು ಹೆಮ್ಮೆಯಾಗುತ್ತಿದೆ.
ವಸಂತ ದಲಾರಿ
ಅಧ್ಯಕ್ಷರು, ಎಸ್‌ಡಿಎಂಸಿ ನಾಣಿಲ ಶಾಲೆ