ಮಾ.4: ಕೊಕ್ಕಡ ಜೇಸಿಯಿಂದ ಆಡಳಿತ ತರಬೇತಿ

0

ನೆಲ್ಯಾಡಿ: ಜೇಸಿಐ ಕೊಕ್ಕಡ ಕಪಿಲಾ ಇದರ ವತಿಯಿಂದ ಘಟಕಾಡಳಿತ ಸಮಿತಿಯ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಮಾ.4ರಂದು ಸಂಜೆ 5 ಗಂಟೆಯಿಂದ ಕೊಕ್ಕಡ ಮರಿಯಾ ಕೃಪಾ ಸಂಕೀರ್ಣದ ಕಚೇರಿಯಲ್ಲಿ ಆಯೋಜಿಸಲಾಗಿದೆ.

2023ನೇ ಸಾಲಿನ ಘಟಕಾಭಿವೃದ್ಧಿ ಮತ್ತು ನಿರ್ವಹಣೆ (ಎಲ್.ಡಿ.ಯಂ.ಟಿ.) ಎಂಬ ವಿಷಯದ ಕುರಿತು ಪ್ರಾಂತ್ಯ ಸಿ. ವಲಯ ಉಪಾಧ್ಯಕ್ಷ ಭರತ್ ಶೆಟ್ಟಿ ಅವರು ತರಬೇತಿ ನೀಡಲಿದ್ದಾರೆ.

ಎಲ್ಲಾ ಸಕ್ರಿಯ ಸದಸ್ಯರು, ಮಹಿಳಾ ಜೇಸಿಗಳು, ಯುವ ಜೇಸಿಗಳು ತರಬೇತಿ ಶಿಬಿರದಲ್ಲಿ ಭಾಗವಹಿಸುವಂತೆ ಜೇಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here