ಪುತ್ತೂರು: 2022-23 ನೇ ಸಾಲಿನ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಡಿ ದಿನಾಂಕ ಫೆ.18 ರಂದು BRC ಇಲ್ಲಿ ನಡೆದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಹಸ್ತ ಕೆ.ಪಿ(ಪದ್ಮನಾಭ ಗೌಡ ಮತ್ತು ಪದ್ಮಾವತಿ ರವರ ಪುತ್ರಿ)ರವರು ಪ್ರಥಮ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ 9ನೇ ತರಗತಿಯ ಅಪೂರ್ವ(ವಸಂತ ಸಾಲ್ವಂಕರ್ ಮತ್ತು ಅರುಣಾ ಪಿ.ಕೆ.ರವರ ಪುತ್ರಿ)ರವರು ಪ್ರಥಮ ಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ 9ನೇ ತರಗತಿಯ ನಿಶ್ಮಾ ರೈ(ತಾರನಾಥ ಎಂ ರೈ ಮತ್ತು ನಯನಾ ಟಿ ರೈ ರವರ ಪತ್ರಿ)ಮತ್ತು ಅನನ್ಯ ಜೆ ಶೆಟ್ಟಿ(ಜಯರಾಮ ಶೆಟ್ಟಿ ಎನ್ ಮತ್ತು ಗುಣಶೀಲ ರವರ ಪುತ್ರಿ)ರವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಫೆ. 20 ರಂದು ಶ್ರವಣಬೆಳಗೊಳದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. 9ನೇ ತರಗತಿಯ ಭಕ್ತಿಶ್ರೀ(ಬಿ.ಲೋಕನಾಥ್ ಗೌಡ ಮತ್ತು ಸುನಂದರವರ ಪುತ್ರಿ)ರವರು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ, ರಾಜ್ಯಮಟ್ಟಕ್ಕೆ ಆಯ್ಕೆ