ಪಡ್ನೂರು: ಮ್ಯಾಟ್ ಕಬಡ್ಡಿ, ಹಗ್ಗಜಗ್ಗಾಟ ಪಂದ್ಯಾಟ

0

ಪುತ್ತೂರು: ಶ್ರೀಧೂಮಾವತಿ ಯುವಕ ಮಂಡಲ ಜುಮಾದಿಪಲ್ಕೆ ಪಡ್ನೂರು ಇದರ ಆಶ್ರಯದಲ್ಲಿ ದಿ.ವಾಸು ನಾಯ್ಕ ಮುಂಡಾಜೆ ಮತ್ತು ದಿ.ಡೊಂಬಯ್ಯ ಗೌಡ ಕಡ್ತಿಮಾರ್ ಇವರ ಸ್ಮರಣಾರ್ಥ ದಿ.ಪಟ್ಟೆಗುತ್ತು ಶಾಂತಕುಮಾರ್ ಆರಿಗ ಪಡ್ನೂರು ಕ್ರಿಡಾಂಗಣದಲ್ಲಿ ಸಮನ್ವಯ ಟ್ರೋಫಿ 58 ಕೆ.ಜಿ.ವಿಭಾಗದ ಪುರುಷರ ಹೊನಲು ಬೆಳಕಿನ ಪ್ರೊ.ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ 510 ಕೆಜಿ ವಿಭಾಗದ ಹಗ್ಗಜಗ್ಗಾಟವು ಪಡ್ನೂರು ಜುಮಾದಿಪಲ್ಕೆಯಲ್ಲಿ ನಡೆಯಿತು. ಭಾರತೀಯ ಲೆಕ್ಕಪತ್ರ ಇಲಾಖೆಯ ಹಿರಿಯ ಲೆಕ್ಕಾಧಿಕಾರಿ ಧರ್ಣಪ್ಪ ನಾಯ್ಕ ಮತ್ತು ಗುತ್ತಿಗಾರು ಉಷಾ ಡಿಜಿಟಲ್ ಸ್ಟುಡಿಯೋ ಮಾಲಕ ಬಾಲಕೃಷ್ಣ ಗೌಡ ಕಡ್ತಿಮಾರ್‌ರವರು ಪಂದ್ಯಾಟ ಉದ್ಘಾಟಿಸಿ ಶುಭಹಾರೈಸಿದರು.


ಸಭಾಕಾರ್ಯಕ್ರಮ: ಸಂಜೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ವಹಿಸಿದ್ದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಕೆ.ಬಿ., ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ಪುತ್ತೂರು ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್ ಅದ್ಯಕ್ಷ ಚಂದ್ರಹಾಸ ಶೆಟ್ಟಿ, ಉಳ್ಳಾಕುಲು ಸಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಪಿಡಬ್ಲ್ಯೂಡಿ ಗುತ್ತಿಗೆದಾರ ರಾಧಾಕೃಷ್ಣ ನಾಕ್, ಬನ್ನೂರು ರೈತರ ಸೇವಾಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಗೆಜ್ಜೆಗಿರಿ ನಂದನಬಿತ್ತಲು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ., ಬೆಂಗಳೂರು ಅನುಗ್ರಹ ಎಂಟರ್‌ಪ್ರೈಸಸ್ ಮಾಲಕ ಮೋನಪ್ಪ ನಾಕ್ ಮುಂಡಾಜೆ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ವಿಟ್ಲ ಉಒಪ್ಪಿಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಕುಂಜಾರು ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋವಿಂದರಾಜು ಅಂಡೆಪುಣಿ, ಪ್ರಗತಿಪರ ಕೃಷಿಕ ಸಂಕಪ್ಪ ಗೌಡ ಕುಂಬಾಡಿ, ಯರ್ಮುಜಪಳ್ಳ ಅಶ್ವತ್ಥಕಟ್ಟೆ ದೇವತಾ ಸಮಿತಿ ಅಧ್ಯಕ್ಷ ಗಿರಿಯಪ್ಪ ಪೂಜಾರಿ ಅಂಡೆಪುಣಿ, ಬನ್ನೂರು ಗ್ರಾ.ಪಂ.ಮಾಜಿ ಸದಸ್ಯ ಮೋಹನ್ ಗೌಡ ವಾಲ್ತಾಜೆ, ಪಡ್ಡಾಯೂರು ಸ್ವಸ್ತಿಕ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಲೋಕೇಶ್ ಗೌಡ ಪಡ್ಡಾಯೂರು, ಧೂಮಾವತಿ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಶೀನಪ್ಪ ಪೂಜಾರಿ ಮಾವಿನಕಟ್ಟೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


ಅವಿನಾಶ್ ಜೈನ್ ಪರಂಗಾಜೆ, ರೋಬರ್ಟ್ ಗೊನ್ಸಾಲ್ವಿಸ್ ಮುಂಡಾಜೆ, ಜಯರಾಜ್ ಪೂಜಾರಿ ಪಟ್ಟೆ, ಚೇತನ್ ಗೌಡ ಕುಂಬಾಡಿ, ಮನೋಜ್ ನಾಯ್ಕ ಪಂಜಿಗುಡ್ಡೆ, ರೋಹನ್‌ರಾಜ್ ಮಾವಿನಕಟ್ಟೆ, ವರುಣ್ ಕೆಪಿ ಪಂಜಿಗುಡ್ಡೆ, ಕಿರಣ್ ಪಂಜಿಗುಡ್ಡೆ, ಚೇತನ್ ಪಡ್ನೂರು, ಉಮೇಶ್ ಮುಂಡಾಜೆ, ಪುನೀತ್ ಗೌಡ ಪಳ್ಳ, ಪ್ರಾಣೇಶ್ ಗಾಣಿಗ ಕುಂಜಾರು, ವಕೀಲರಾದ ಮನೋಹರ ಎ. ಆರುವಾರ, ನೈತಿಕ ಆರಿಗ ಪಟ್ಟೆಗುತ್ತು, ಕೃಷ್ಣಪ್ಪ ಪೂಜಾರಿ ಕೂಟೇಲು, ಜಯಂತ್ ಶೆಟ್ಟಿ ಮುಂಡಾಜೆ, ಕೃಷ್ಣಪ್ಪ ನಾಯ್ಕ ಪರಂಗಾಜೆ, ನಾರಾಯಣ್ ನಾಯ್ಕ ಕುಂಬಾಡಿ, ಗಂಗಾಧರ ಗೌಡ, ಜನಾರ್ದನ ಮೂಲ್ಯ, ನಾರಾಯಣ ಮೂಲ್ಯ ಕಡ್ತಿಮಾರ್, ಮೋಹನ್ ಗೌಡ ವಾಲ್ತಾಜೆ, ಶಿವಪ್ಪ ನಾಯ್ಕ, ದೇವದಾಸ್, ವಸಂತ್ ಗೌಡ, ಸುನಿಲ್, ಅಜಿತ್, ಧನಂಜಯ, ಯತೀನ್, ಗನೇಶ್ ಪಳ್ಳ, ಸಾಂತಪ್ಪ ನಾಯ್ಕ, ಗಣೇಶ್ ಸಫಲ್ಯ, ತೇಜರಾಜ್ ಪಟ್ಟೆ, ಭರತ್ ಗೌಡ, ಪ್ರಕಾಶ್ ಪಳ್ಳ, ಗುರುರಾಜ್, ಯಕ್ಷಿತ್, ರಂಜಿತ್ ಕೂಟೇಲು, ಜನಾರ್ಧನ ಪಂಜಿಗುಡ್ಡೆ, ತಿಲಕ್ ಕಡ್ತಿಮಾರ್, ಗಿರಿಧರ ಕಡ್ತಿಮಾರ್, ಗಣೇಶ್ ನಾಯ್ಕರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವಿಜೇತರು

ಕಬಡ್ಡಿ: ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಹೊಳ್ಳ ಕ್ರಿಕೆಟರ್‍ಸ್ ಮತ್ತು ದ್ವಿತೀಯ ಬಹುಮಾನವನ್ನು ಸ್ವಾಗತ್ ಫ್ರೆಂಡ್ಸ್ ಪಡ್ನೂರು ಹಾಗೂ ತೃತೀಯ ಬಹುಮಾನವನ್ನು ಶ್ರೀಕ್ಷೇತ್ರ ಮೂಡತ್ತಾರು ಕೊರತಿಕಟ್ಟೆ, ನಾಲ್ಕನೇ ಬಹುಮಾನವನ್ನು ಶ್ರೀಚಾಮುಂಡೇಶ್ವರಿ ಮುಂಡಾರಬೈಲು ತಂಡ ಪಡೆದುಕೊಂಡಿದೆ. ಬೆಸ್ಟ್ ಆಲ್‌ರೌಂಡರ್ ರೂಪೇಶ್, ಉತ್ತಮ ಕ್ಯಾಚ್ ನವೀನ್ ಕುಮಾರ್ ಪಡೆದುಕೊಂಡರು.


ಹಗ್ಗಜಗ್ಗಾಟ:

ಹಗ್ಗಜಗ್ಗಾಟದಲ್ಲಿ ವಿಐಪಿ ವಿಠಲ ತಂಡ ಪ್ರಥಮ,
ನ್ಯೂ ಫ್ರೆಂಡ್ಸ್ ದ್ವಿತೀಯ, ಫ್ರೆಂಡ್ಸ್ ಕುಡುಪುತ್ತಡ್ಕ ತೃತೀಯ
ಹಾಗೂ ನವಶಕ್ತಿ ಮುಂಡೂರು ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here