ಮಾ.4: ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯ ವಾರ್ಷಿಕ ಮಹಾ ಸಮ್ಮೇಳನ

0

ಮಜ್ಲಿಸುನ್ನೂರ್ ಆತ್ಮೀಯ ಸಂಗಮ-ಸಿಂಸಾರುಲ್ ಹಖ್ ಹುದವಿಯವರಿಂದ ಪ್ರಭಾಷಣ
ಶಿಕ್ಷಣ ಸಂಸ್ಥೆಯ ಪ್ರಮುಖರಿಂದ ಪತ್ರಿಕಾಗೋಷ್ಠಿ

ಪುತ್ತೂರು: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯಲ್ಲಿ ಮಾ.4ರಂದು ಸಂಜೆ 6.30ಕ್ಕೆ ವಾರ್ಷಿಕ ಮಹಾಸಮ್ಮೇಳನ ನಡೆಯಲಿದ್ದು ಅಂತರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಹೇಳಿದರು.

ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಮಾ.2ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಸಯ್ಯಿದ್ ಬುರ್ಹಾನ್ ಆಲಿ ತಂಙಳ್ ಅಲ್ ಬುಖಾರಿ ಪ್ರಾರ್ಥನೆಯ ನೇತೃತ್ವ ವಹಿಸಲಿದ್ದಾರೆ. ನಂತರ ‘ಮಜ್ಲಿಸುನ್ನೂರ್’ ಆತ್ಮೀಯ ಸಂಗಮ ನಡೆಯಲಿದ್ದು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸಮಸ್ತ ಉಲಮಾ ಒಕ್ಕೂಟದ ಸದಸ್ಯರಾದ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ, ಉಸ್ಮಾನುಲ್ ಫೈಝಿ, ಸೈಯ್ಯದ್ ಅಮೀರ್ ತಂಙಳ್ ಕಿನ್ಯ, ಸೈಯ್ಯದ್ ಬಾತಿಷಾ ತಂಙಳ್, ಇರ್ಷಾದ್ ದಾರಿಮಿ, ಸೈಯ್ಯದ್ ಬಾಅಲವಿ ತಂಙಳ್ ಕುಕ್ಕಾಜೆ, ಸೈಯ್ಯದ್ ಅನಸ್ ತಂಙಳ್ ಗಂಡಿಬಾಗಿಲು, ಸೈಯ್ಯದ್ ಹುಸೈನ್ ತಂಙಳ್ ಜಿಫ್ರಿ ತಂಙಳ್, ಸೈಯ್ಯದ್ ತಾಹಾ ತಂಙಳ್ ಬೆಳ್ತಂಗಡಿ, ಸೈಯ್ಯದ್ ಸಾಲ್ಮರ ತಂಙಳ್, ಸೈಯ್ಯದ್ ಅಕ್ರಂ ಅಲಿ ತಂಙಳ್, ಸೈಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಮಾಡನ್ನೂರ್, ಸಿರಾಜುದ್ದೀನ್ ಫೈಝಿ ಮೊದಲಾದವರು ನೇತೃತ್ವ ನೀಡಲಿದ್ದಾರೆ.

ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಲಿದ್ದು ಮಹಾ ಸಮ್ಮೇಳನವನ್ನು ಗೌರಾವಾಧ್ಯಕ್ಷರಾದ ಸೈಯ್ಯದ್ ಕೆ.ಎಸ್ ಅಲಿ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಮ್ಯಾನೇಜರ್ ಕೆಯು ಖಲೀಲುರಹ್ಮಾನ್ ಅರ್ಶದಿ ಕೋಲ್ಪೆ, ಪ್ರಿನ್ಸಿಪಾಲ್ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಪ್ರಾಸ್ತಾವನೆ ಭಾಷಣ ನಡೆಸಲಿದ್ದು ಅಂತರಾಷ್ಟ್ರೀಯ ಯುವ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣಗೈಯಲ್ಲಿದ್ದಾರೆ.

ಜಮಾಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಗಳ ಅಬೂಬಕ್ಕರ್ ಹಾಜಿ, ಕೋಶಾಧಿಕಾರಿ ಎನ್ ಎಸ್ ಅಬ್ದುಲ್ಲಾ ಹಾಜಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಹಿರಾ ಅಬ್ದುಲ್ ಖಾದರ್ ಹಾಜಿ, ಅಲ್ಲದೇ ಹಲವಾರು ಪ್ರಮುಖ ಸಾದಾತ್ ಉಲಮಾ ಉಮರಾ ನಾಯಕರು ಚಿಂತಕರು ರಾಜಕೀಯ ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಭಿವೃದ್ಧಿಯ ಪಥದಲ್ಲಿ ನೂರುಲ್ ಹುದಾ:
ಕನ್ನಡ, ಮಲಯಾಳಂ, ಇಂಗ್ಲೀಷ್, ಹಿಂದಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಇದೀಗ ಮಿಶನ್ ಕನ್ನಡ ಎಂಬ ವಿಶಿಷ್ಟ ಅಭಿಯಾನ ಆರಂಭಿಸುತ್ತಿದ್ದೇವೆ. ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವುದು ಉದ್ದೇಶ. ಇದಕ್ಕಾಗಿ ಚಿಗುರು ಎಂಬ ಪತ್ರಿಕೆ ಆರಂಭಿಸಿದ್ದು ಸಂಸ್ಥೆಯಲ್ಲಿ ಸಾಹಿತ್ಯ ಉತ್ಸವ ಮಾಡುತ್ತಿದ್ದೇವೆ. ಪ್ರತಿಭಾ ಕಾರಂಜಿ ಸೇರಿದಂತೆ ಸರಕಾರದ ನೇತೃತ್ವದಲ್ಲಿ ನಡೆಯುವ ಎಲ್ಲ ಕನ್ನಡ ಸ್ಪರ್ಧೆ, ಉತ್ಸವಗಳಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಕಮ್ಮಟ ನಡೆಸಲಾಗುತ್ತದೆ. 2022ರ ಸಾಲಿನ ರಾಷ್ಟ್ರ ಮಟ್ಟದ ಸಿಬಾಖ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ತನ್ನ ಸಾಂಸ್ಕೃತಿಕ ಹಿರಿಮೆಗಾಗಿ ಪಡೆದುಕೊಂಡಿದೆ. ನಮ್ಮ ಮಕ್ಕಳು ಮುಖ್ಯವಾಹಿನಿಯ ಸಾಹಿತ್ಯ ಪರಂಪರೆಯಲ್ಲಿ ಬೆಳೆಯಬೇಕೆಂಬುದು ನಮ್ಮ ಉದ್ದೇಶ ಎಂದು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಹೇಳಿದರು.

ಸಿಂಸಾರುಲ್ ಹಖ್ ಹುದವಿ

ಉಚಿತ ಶಿಕ್ಷಣ:
ಕೇರಳದ ದಾರುಲ್ ಹುದಾ ಇಸ್ಲಾಮಿಕ್ ವಿವಿಯ ಅಂಗವಾಗಿರುವ ಅನುದಾನ ರಹಿತ ಶಾಲೆ ಇದಾಗಿದ್ದು, ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. 6ನೇ ತರಗತಿಯಿಂದ ಡಿಗ್ರಿ ಪ್ರಥಮ ವರ್ಷದವರೆಗೆ ಕರ್ನಾಟಕ ಸರಕಾರದ ಪಠ್ಯಕ್ರಮವನ್ನು ಮುಸ್ಲಿಂ ಗಂಡು ಮಕ್ಕಳಿಗೆ ಬೋಧಿಸಲಾಗುತ್ತದೆ. ಜತೆಯಲ್ಲೇ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣವನ್ನೂ ನೀಡಲಾಗುತ್ತದೆ. ಪ್ರತೀ ವರ್ಷ 250ಕ್ಕಿಂತಲೂ ಹೆಚ್ಚು ಅರ್ಜಿ ಬರುತ್ತಿದ್ದು, 45 ಮಕ್ಕಳನ್ನು ಆರಿಸಿಕೊಂಡು ಅವರಿಗೆ ಲೌಕಿಕ, ಧಾರ್ಮಿಕ ಶಿಕ್ಷಣದೊಂದಿಗೆ ಉಚಿತ ಊಟ, ವಸತಿ ನೀಡಲಾಗುತ್ತಿದೆ. ಪದವಿಯ ಕೊನೆಯ 2 ವರ್ಷವನ್ನು ವಿದ್ಯಾರ್ಥಿಗಳು ದಾರುಲ್ ಹುದಾ ವಿವಿಯಲ್ಲಿ ಪಡೆಯಬೇಕಾಗುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ 322 ಮಕ್ಕಳಿದ್ದಾರೆ. ಪ್ರತೀ ತಿಂಗಳು ಉಚಿತ ಶಿಕ್ಷಣಕ್ಕಾಗಿ 13 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಅವಕಾಶ ಕಲ್ಪಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಿನ್ಸಿಪಾಲ್ ಹನೀಫ್ ಹುದವಿ ದೇಲಂಪಾಡಿ, ಪ್ರಧಾನ ಕಾರ್ಯದರ್ಶಿ ಮಂಗಳ ಅಬೂಬಕ್ಕರ್ ಹಾಜಿ, ಸ್ವಾಗತ ಸಮಿತಿ ಸಂಚಾಲಕ ಸಿ.ಎಚ್. ಅಬ್ದುಲ್ ಅಝೀಝ್ ಹಾಜಿ, ನೂರುಲ್ ಹುದಾ ಕೋಶಾಧಿಕಾರಿ ಎನ್.ಎಸ್ ಅಬ್ದುಲ್ಲಾ ಹಾಜಿ, ನೂರುಲ್ ಹುದಾ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಮಂಡೆಕೋಲು, ಕಾರ್ಯದರ್ಶಿಗಳಾದ ಅಬ್ದುಲ್ ಖಾದರ್ ಮುಸ್ಲಿಯಾರ್, ಹಸೈನಾರ್ ಎಂ.ಡಿ, ಸದಸ್ಯ ಖಾಲಿದ್ ಬಿ.ಎಂ, ಸ್ವಾಗತ ಸಮಿತಿ ಸದಸ್ಯರಾದ ಮಹಮ್ಮದ್ ರಫೀಕ್, ಮಹಮ್ಮದ್ ಕುಂಬ್ರ, ಶಿಕ್ಷಕ- ರಕ್ಷಕ ಸಂಘದ ಪ್ರ.ಕಾರ್ಯದರ್ಶಿ ನಾಸಿರ್ ಬೆಳ್ಳಾರೆ, ಅರಿಯಡ್ಕ ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ ಕಾವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here