ಪುತ್ತೂರು : 2018 ರಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಸಿ ಪ್ರತಿಭಟನೆ ಮಾಡಿದ ಮತ್ತು 2019 ರಲ್ಲಿ ಚೆಕ್ ಬೌನ್ಸ್ ಸೇರಿದಂತೆ ಎರಡೂ ಪ್ರಕರಣದ ವಾರಂಟ್ ಆರೋಪಿ ಕೂರ್ನಡ್ಕದ ಉಮ್ಮರ್ ಎಂಬವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಚುನಾವಣಾ ನೀತಿ ಸಂಹಿತೆ ಇದ್ದಾಗಲೂ ಸಂಘಟನೆಯೊಂದರ ಜೊತೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೂರ್ನಡ್ಕದ ಉಮ್ಮರ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಉಮ್ಮರ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ಮತ್ತೊಂದು ಕಡೆ 2019ರಲ್ಲಿ ಉಮ್ಮರ್ ಅವರ ವಿರುದ್ಧ ಕುಂಬ್ರದ ವ್ಯಕ್ತಿಯೊಬ್ಬರು ಚೆಕ್ ಬೌನ್ಸ್ ದೂರು ನೀಡಿದ್ದರು. ಈ ಪ್ರಕರಣದಲ್ಲೂ ಉಮ್ಮರ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ದ ಎರಡೂ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ವಾರಂಟ್ ಜಾರಿ ಮಾಡಿತ್ತು.
ಪುತ್ತೂರು ಪೊಲೀಸರು ಆರೋಪಿಯನ್ನು ಕೂರ್ನಡ್ಕದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ನ್ಯಾಯಾಲಯದಲ್ಲಿ ಬಾಂಡ್ ಹಣ ಕಟ್ಟಿದ ಬಳಿಕ ಜಾಮೀನು ಮಂಜೂರುಗೊಂಡಿದೆ. ಅದೇ ರೀತಿ ಚೆಕ್ ಬೌನ್ಸ್ ಪ್ರಕರಣಕ್ಕೂ ಬಾಂಡ್ ಹಣ ಕಟ್ಟಿದ ಬಳಿಕ ಜಾಮೀನು ಮಂಜೂರುಗೊಂಡಿದೆ.