ಪುತ್ತೂರು: ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು,ಫ್ರೆಂಡ್ ಸ್ಪೋರ್ಟ್ಸ್ ಕ್ಲಬ್ ಸಾಲ್ಕರ,ಲಯನ್ಸ್ ಕ್ಲಬ್ ಪತ್ತೂರ್ದ ಮುತ್ತು, ಲಯನ್ಸ್ ಕ್ಲಬ್ ಪುತ್ತೂರು ಕಾವು ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಮತ್ತು ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇವರ ಸಹಯೋಗದಲ್ಲಿ ದಿ. ಅವಿನಾಶ್ ಆಳ್ವ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಾ. 5 ರಂದು ಬೆಳಿಗ್ಗೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಗರಸಭಾ ಅಧ್ಯಕ್ಷರಾದ ಜೀವಂದರ್ ಜೈನ್ ಉದ್ಘಾಟಿಸಲಿದ್ದು , ತುಳುನಾಡ ವೈಭವ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಶ್ವಾಸಕೋಶ, ಅಸ್ತಮಾ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮಕ್ಕಳ ಶಸ್ತ್ರ ಚಿಕಿತ್ಸೆ, ಎಲುಬು ಮತ್ತು ಕೀಲು ವಿಭಾಗ, ಬೆನ್ನು ಮೂಳೆ ಚಿಕಿತ್ಸೆ, ಮೊಣಕಾಲು ಚಿಕಿತ್ಸೆ, ಅಪೆಂಡಿಕ್ಸ್, ಅಲ್ಸರ್, ಹರ್ನಿಯಾ, ಮೂಲವ್ಯಾಧಿ, ಗರ್ಭಕೋಶದ ಗಡ್ಡೆ, ಕಿವಿ, ಮೂಗು, ಗಂಟಲು, ಥೈರಾಯಿಡ್, ಸಂಧಿವಾತ, ಉದರ ಸಂಬಂಧಿ ಕಾಯಿಲೆಗಳು, ಬೇರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ,ಕಣ್ಣಿನ ತಪಾಸಣೆ ಮಾಡಲಾಗುವುದು. ಶಿಬಿರದಲ್ಲಿ ಔಷಧಿಗಳು ಉಚಿತವಾಗಿ ನೀಡಲಾಗುವುದು. ನೋಂದಾವಣೆ ಮಧ್ಯಾಹ್ನ 12.30ರ ತನಕ ಮಾತ್ರ 2 ವೈದ್ಯಕೀಯ ಶಿಬಿರದಲ್ಲಿ ಕಣಚೂರು ಕ್ಯಾಂಪ್ ಕಾರ್ಡ್ ನೀಡಲಾಗುವುದು ಮಾಹಿತಿಗಾಗಿ 9164632671, 9902207487, 7353774782 9980012762,