ನಾಳೆ(ಮಾ.6) ನೆಲ್ಯಾಡಿ ಡಿಯೋನ್ ಸ್ಕ್ವೇರ್ಗೆ ಸೀಗಲ್ ಟ್ರೇಡರ್ಸ್, ಎಬಿಸಿ ಬೇಕರಿ, 4 ಮಾರ್ಕ್ ಫರ್ನಿಚರ್, ಸ್ಟ್ರಾಬೆರಿ ಕಿಡ್ಸ್ ಸ್ಥಳಾಂತರ, ಸನ್ಸಾರ್ ಕಿಚನ್ವೇರ್ ಶುಭಾರಂಭ
ನೆಲ್ಯಾಡಿ: ತಮ್ಮ ಮನೆಗೆ ಬೇಕಾದ ಅವಶ್ಯಕ ವಸ್ತುಗಳ ಖರೀದಿಗೆ ಇನ್ನು ಪೇಟೆಯಲ್ಲಿ ಅಲೆದಾಡಬೇಕಿಲ್ಲ, ಪಾರ್ಕಿಂಗ್ ಕಿರಿಕಿರಿ ಇಲ್ಲ. ಇಂತಹ ಸದಾವಕಾಶ ನೆಲ್ಯಾಡಿಯ ಜನತೆಗೆ ಲಭಿಸುತ್ತಿದೆ. ಇನ್ನು ಮುಂದೆ ಗ್ರಾಹಕರಿಗೆ ಒಂದೇ ಮಳಿಗೆಯಲ್ಲಿ ಎಲ್ಲಾ ವಸ್ತುಗಳನ್ನು ಕೊಂಡುಕೊಳ್ಳುವ ಅವಕಾಶ ಸಿಗಲಿದೆ.
ನೆಲ್ಯಾಡಿಯ ಪೇಟೆಯ ವಿವಿಧ ಕಡೆಗಳಲ್ಲಿದ್ದ ಸೀಗಲ್ ಟ್ರೇಡರ್ಸ್, ಎಬಿಸಿ ಬೇಕರಿ ಮತ್ತು ಐಸ್ ಕ್ರೀಮ್ ಪಾರ್ಲರ್, ೪ ಮಾರ್ಕ್ ಫರ್ನಿಚರ್, ಸ್ಟ್ರಾಬೆರಿ ಕಿಡ್ಸ್ ನೆಲ್ಯಾಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಇತ್ತೀಚೆಗೆ ಉದ್ಘಾಟನೆಗೊಂಡ ಸುಸಜ್ಜಿತ ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣಕ್ಕೆ ಮಾ.೬ರಂದು ಬೆಳಿಗ್ಗೆ ಸ್ಥಳಾಂತರಗೊಳ್ಳಲಿದೆ. ಇದರ ಜೊತೆಗೆ ಸನ್ಸಾರ್ ಕಿಚನ್ವೇರ್ ಸಹ ಶುಭಾರಂಭಗೊಳ್ಳುತ್ತಿದೆ. ಈ ಮೂಲಕ ನೆಲ್ಯಾಡಿಗೆ ಬರುವ ಗ್ರಾಹಕರಿಗೆ ತಮಗೆ ಬೇಕಾದ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಒಂದೇ ಮಳಿಗೆಯಲ್ಲಿ ಕೊಂಡುಕೊಳ್ಳುವ ಸದಾವಕಾಶ ಸಿಗಲಿದೆ.
ಪಾರ್ಕಿಂಗ್ ಕಿರಿಕಿರಿ ಇಲ್ಲ:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ಹೆದ್ದಾರಿ ಅಗಲೀಕರಣಗೊಳ್ಳುತ್ತಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ನೆಲ್ಯಾಡಿ ಪೇಟೆಯ ಚಿತ್ರಣವೇ ಬದಲಾಗಲಿದೆ. ಪೇಟೆಯ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ಬರುವುದರಿಂದ ಮುಂದೆ ಪಾರ್ಕಿಂಗ್ ಸಮಸ್ಯೆ ಎದುರಾಗಲಿದೆ. ಇದರಿಂದ ಗ್ರಾಹಕರು ಕಿರಿಕಿರಿ ಅನುಭವಿಸಬೇಕಾಗಿದೆ. ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣಕ್ಕೆ ಬಂದಲ್ಲಿ ಇವೆಲ್ಲವುಗಳಿಂದ ಮುಕ್ತಿ ಪಡೆಯಬಹುದಾಗಿದೆ. ಡಿಯೋನ್ ಸ್ಕ್ವೇರ್ ಮುಂಭಾಗ ಸಾಕಷ್ಟು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲದೇ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯೂ ಇದೆ. ಇದರಿಂದ ನೆಲ್ಯಾಡಿಗೆ ಬರುವ ಗ್ರಾಹಕರಿಗೆ ಅನುಕೂಲವಾಗಲಿದೆ.
ಇಂದು ಸ್ಥಳಾಂತರ/ಶುಭಾರಂಭ:
ಕಳೆದ ಹಲವು ವರ್ಷಗಳಿಂದ ನೆಲ್ಯಾಡಿ ಪೇಟೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದ, ದಿನಸಿ ಸಾಮಾಗ್ರಿಗಳ ಮಾರಾಟದಲ್ಲಿ ಹೆಸರು ಪಡೆದುಕೊಂಡಿರುವ ಸೀಗಲ್ ಟ್ರೇಡರ್ಸ್, ಜನರಲ್ ಮರ್ಚೆಂಟ್, ವೆಜಿಟೇಬಲ್ ಮತ್ತು ಪ್ರೂಟ್ಸ್ ಅಂಗಡಿ, ಎಬಿಸಿ ಬೇಕರಿ ಮತ್ತು ಐಸ್ಕ್ರೀಮ್ ಪಾರ್ಲರ್, ೪ ಮಾರ್ಕ್ ಫರ್ನಿಚರ್ ಹಾಗೂ ಸ್ಟ್ರಾಬೆರಿ ಕಿಡ್ಸ್ ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಹೊಸದಾಗಿ ಆರಂಭಗೊಳ್ಳುತ್ತಿರುವ ಸನ್ಸಾರ್ ಕಿಚನ್ ವೇರ್ ಶುಭಾರಂಭಗೊಳ್ಳಲಿದೆ. ಈ ಎಲ್ಲಾ ಮಳಿಗೆಗಳು ಸಾಕಷ್ಟು ವಿಶಾಲ ಜಾಗವನ್ನು ಹೊಂದಿದ್ದು ಗ್ರಾಹಕರು ಆರಾಮವಾಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಈ ಎಲ್ಲಾ ಮಳಿಗೆಗೆಳು ಮಾ.೬ರಂದು ಬೆಳಿಗ್ಗೆ ೯.೩೦ಕ್ಕೆ ಶುಭಾರಂಭಗೊಳ್ಳಲಿದ್ದು ಗ್ರಾಹಕರು ಆಗಮಿಸಿ ಪ್ರೋತ್ಸಾಹಿಸುವಂತೆ ಮಾಲಕರು ವಿನಂತಿಸಿದ್ದಾರೆ.