ಎಮ್ಮೆಮಾಡು ಉರೂಸ್‌ಗೆ ಹೋಗಿದ್ದ ನೆಲ್ಯಾಡಿ ನಿವಾಸಿ ಕುಸಿದು ಬಿದ್ದು ಸಾವು

0

ನೆಲ್ಯಾಡಿ: ಮಡಿಕೇರಿಯ ಎಮ್ಮೆಮಾಡು ಉರೂಸ್‌ಗೆ ಹೋಗಿದ್ದ ನೆಲ್ಯಾಡಿ ಹೊಸಮಜಲು ನಿವಾಸಿಯೋರ್ವರು ಅಲ್ಲಿನ ಮಸೀದಿಯ ಹೊರಗೆ ಕುಸಿದು ಬಿದ್ದು ಮೃತಪಟ್ಟ ಘಟನೆ ಮಾ.3ರಂದು ನಡೆದಿದೆ.

ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಶಾಲೆಯ ಬಳಿಯ ನಿವಾಸಿ, ಟಿಂಬರ್ ಮರ್ಚೆಂಟ್ ಹುಸೈನ್(55ವ.)ಮೃತಪಟ್ಟವರಾಗಿದ್ದಾರೆ. ಹುಸೈನ್‌ರವರು ಮಾ.3ರಂದು ಬೆಳಿಗ್ಗೆ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ದೋಂತಿಲ ನಿವಾಸಿ ಐಸಮ್ಮರವರು ಏರ್ತಿಲ ಎಂಬಲ್ಲಿ ಅರಣ್ಯದಲ್ಲಿರುವ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳೀಯರೊಂದಿಗೆ ರಿಕ್ಷಾದಲ್ಲಿ ಅಲ್ಲಿಗೆ ತೆರಳಿ ಅವರನ್ನು ಮನೆಗೆ ತಲುಪಿಸುವಲ್ಲಿ ಸಹಕರಿಸಿದ್ದರು.

ಆ ಬಳಿಕ ಅವರು ಇತರರ ಜೊತೆಗೆ ರಿಕ್ಷಾದಲ್ಲಿ ಮಡಿಕೇರಿಯ ಎಮ್ಮೆಮಾಡು ಉರೂಸ್‌ಗೆ ತೆರಳಿದ್ದರು. ಅಲ್ಲಿ ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಗೆ ಮಸೀದಿಯೊಳಗೆ ಹೋಗುತ್ತಿದ್ದಂತೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ನಾಪೊಕ್ಲು ಆಸ್ಪತ್ರೆಗೆ ಕರೆ ತರಲಾಯಿತಾದರೂ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದರು. ಬಳಿಕ ಮೃತದೇಹವನ್ನು ಅಲ್ಲಿನ ಮಸೀದಿಗೆ ತಂದು ಅಂತಿಮ ಕ್ರಿಯೆ ನಡೆಸಿ ಆಂಬುಲೆನ್ಸ್‌ನಲ್ಲಿ ಹೊಸಮಜಲು ಮಸೀದಿಗೆ ತಂದು ದPನ ಮಾಡಲಾಯಿತು.

ಮೃತ ಹುಸೈನ್‌ರವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here