ಪುತ್ತೂರು:9 ವರ್ಷಗಳ ಹಿಂದೆ ಕೌಕ್ರಾಡಿಯ ದಡ್ಡಲ್ಪಲ್ಕೆ ಎಂಬಲ್ಲಿ ನಡೆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 5 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ನಿವಾಸಿ ಮೂರ್ತಿ ಬಂಧಿತ ಆರೋಪಿ. 2014ರ ಮೇ 30ರಂದು ಕೌಕ್ರಾಡಿ ದಡ್ಡಲ್ಪಲ್ಕೆ ಎಂಬಲ್ಲಿ ನಡೆದ ಬಸ್ ಮತ್ತು ಆಟೋ ರಿಕ್ಷಾ ಅಪಘಾತಕ್ಕೆ ಸಂಬಂಧಿಸಿ, ಆ ಸಂದರ್ಭ ಬಸ್ ಚಾಲಕರಾಗಿದ್ದ ಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ಸಂಚಾರ ಪೊಲೀಸರು ಆರೋಪಿಯನ್ನು ಬೆಂಗಳೂರಿನ ಹೊಸಕೋಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.