ಮಾ.9: ರಕ್ತದಾನ ಶಿಬಿರ,
ಮಾ.10: ಅಟೋರಿಕ್ಷಾ ಮೆರವಣಿಗೆ, ಸನ್ಮಾನ
ಪುತ್ತೂರು: ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಆಶ್ರಯದಲ್ಲಿ ಮಾ.10ರಿಂದ 12ರವರೆಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ರಾಜೀವ್ ಗಾಂಧಿ ಟ್ರೋಫಿ, 32 ತಂಡಗಳ ಗ್ರಾಮಗ್ರಾಮಗಳ ಲೀಗ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಪಂದ್ಯಾಟದ ಪ್ರಥಮ ಬಹುಮಾನ ರೂ.5೦೦೦೦ ಮತ್ತು ರಾಜೀವ್ ಗಾಂಧಿ ಟ್ರೋಫಿ, ದ್ವಿತೀಯ ಬಹುಮಾನ ರೂ.3೦೦೦೦ ಮತ್ತು ರಾಜೀವ್ ಗಾಂಧಿ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನ ನೀಡಲಾಗುವುದು. ಪ್ರವೇಶ ಶುಲ್ಕ ಉಚಿತವಾಗಿರುತ್ತದೆ.
ಮಾ.9 ರಕ್ತದಾನ ಶಿಬಿರ: ರಾಜೀವ್ ಗಾಂಧಿ ಟ್ರೋಫಿ ಪ್ರಯುಕ್ತ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಸಹಭಾಗಿತ್ವದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಮತ್ತು ಆಶಾಜ್ಯೋತಿ ರಕ್ತ ಕೇಂದ್ರ ಶಿವಮೊಗ್ಗ ಸಹಯೋಗದೊಂದಿಗೆ ಮಾ.9ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಪುತ್ತೂರು ಟೌನ್ಹಾಲ್ ಹೊರಾಂಗಣದಲ್ಲಿ ನಡೆಯಲಿದೆ.
ಮಾ.10ರಂದು ಅಟೋರಿಕ್ಷಾ ಮೆರವಣಿಗೆ, ಸನ್ಮಾನ: ಯಂಗ್ಬ್ರಿಗೇಡ್ ಸೇವಾದಳ ಪುತ್ತೂರು ಆಯೋಜನೆಯಲ್ಲಿ ಮಾ.10ರಂದು ಸಂಜೆ 4ರಿಂದ ದರ್ಬೆ ಅಶ್ವಿನಿ ವೃತ್ತದಿಂದ ಕಿಲ್ಲೆ ಮೈದಾನದವರೆಗೆ ರಾಜೀವ್ ಗಾಂಧಿ ಟ್ರೋಫಿ ಮೆರವಣಿಗೆ ಮತ್ತು ಪುತ್ತೂರಿನ ಆಪತ್ಭಾಂಧವರಾಗಿ ಸೇವೆ ಸಲ್ಲಿಸುವ ಅಟೋರಿಕ್ಷಾ ಚಾಲಕ ಮಾಲಕರ ಮೆರವಣಿಗೆ ನಡೆಯಲಿದೆ. ಬಳಿಕ ಕಿಲ್ಲೆ ಮೈದಾನದಲ್ಲಿ ರಿಕ್ಷಾ ಚಾಲಕ ಮಾಲಕರಿಗೆ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಹ ರಿಕ್ಷಾ ಚಾಲಕ ಮಾಲಕರಿಗೆ ವಿಶೇಷ ಬಹುಮಾನ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 32 ಇಂಚು ಎಲ್ಇಡಿ ಟಿವಿ, ದ್ವಿತೀಯ ಬಹುಮಾನ ಮಿಕ್ಸಿ, ತೃತೀಯ ಬಹುಮಾನ ಕುಕ್ಕರ್ ನೀಡಲಾಗುವುದು ಎಂದು ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರ ಮತ್ತು ವಿಟ್ಲ ಉಪ್ಪಿನಂಗಡಿ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ತಿಳಿಸಿದ್ದಾರೆ.