ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ 7ನೇ ವರ್ಷದ ಗುರುಪೂಜಾ ಮತ್ತು ಭಜನಾ ಕಾರ್ಯಕ್ರಮ ಹಾಗೂ ಸನ್ಮಾನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಮಾ.12 ರಂದು ಕಲ್ಲರ್ಪೆ ಬಂಗೇರ ಕುಟುಂಬಸ್ಥರ ತರವಾಡು ಮನೆಯಲ್ಲಿ ಜರಗಲಿದೆ.
ಪೂರ್ವಾಹ್ಮ ಜರಗುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್ ಸಾರಕರೆರವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಸನ್ಮಾನಿತರನ್ನು ಸನ್ಮಾನಿಸಲಿದ್ದಾರೆ. ಉಪನ್ಯಾಸಕಿ ರೇಣುಕಾ ಕಣಿಯೂರುರವರು ಗುರು ಸಂದೇಶ ನೀಡಲಿದ್ದಾರೆ. ವಕೀಲರು ಹಾಗೂ ಪುತ್ತೂರು ಬಿಲ್ಲವ ಸಂಘದ ವಿದ್ಯಾನಿಧಿ ಸಂಚಾಲಕ ಮನೋಹರ್ರವರು ಬಹುಮಾನ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಲ್ಲರ್ಪೆ ತರವಾಡು ಮನೆಯ ಹಿರಿಯರಾದ ಎಲ್ಯಣ್ಣ ಪೂಜಾರಿ ಮುಂಡೋಡಿ, ಪುತ್ತೂರು ಬಿಲ್ಲವ ಸಂಘದ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಹಾಗೂ ನರಿಮೊಗರು ವಲಯ ಸಂಚಾಲಕ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲು, ಪುತ್ತೂರು ಯುವವಾಹಿನಿ ಅಧ್ಯಕ್ಷ ಉಮೇಶ್ ಬಾಯಾರುರವರು ಭಾಗವಹಿಸಲಿದ್ದಾರೆ ಎಂದು ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ನಾಗೇಶ್ ಸಾರಕರೆ, ಶಾಂತಿಗೋಡು ಯುವವಾಹಿನಿ ಗ್ರಾಮ ಸಮಿತಿ ಅಧ್ಯಕ್ಷ ರಾಘವ ಬೊಳ್ಳೆಕ್ಕು, ಶಾಂತಿಗೋಡು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾಕ್ಷ ಪೇರಡ್ಕ, ಶಾಂತಿಗೋಡು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಆಶಾ ಸಚೀಂದ್ರ ಬೊಳ್ಳೆಕ್ಕುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.