ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದಲ್ಲಿ 30ನೇ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ 30ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ಮಾ.8ರಂದು ಶ್ರೀ ನಂದಿಕೇಶ್ವರ ಭಜನಾ ಮಂದಿರದ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಮಾ.7ರಂದು ರಾತ್ರಿ ಭಜನಾ ಕಾರ್ಯಕ್ರಮವು ನೆರವೇರಿದ್ದು, ಮಾ.8ರಂದು ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ, ಸಾಯಂಕಾಲ ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ಬಳಿಕ ಶ್ರೀ ರಕ್ತೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ಜರಗಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಜರಗಿದ್ದು, ಸಾಯಂಕಾಲ ಊರಿನ ಮಕ್ಕಳಿಂದ ಕುಣಿತ ಭಜನೆ ನಡೆಯಿತು.

ಭಜನಾ ಮಂದಿರದ ಗೌರವ ಸಲಹೆಗಾರರಾದ ಉದಯ ಕುಮಾರ್ ತಂತ್ರಿ, ಸುಜಯಕೃಷ್ಣ ತಂತ್ರಿ, ಮೋಹನ್ ನಾಯಕ್ ಬೆದ್ರಾಳ, ರಾಜ್‌ಕುಮಾರ್ ರೈ ಬೆದ್ರಾಳ, ಮನೋಜ್ ಕುಮಾರ್ ಬೆದ್ರಾಳ, ಪದ್ಮನಾಭ ಪೂಜಾರಿ ಬೆದ್ರಾಳ, ಕೇಶವ ಪೂಜಾರಿ ಬೆದ್ರಾಳ, ನವೀನ್ ಚಂದ್ರ ನಾಯ್ಕ್ ನೆಲ್ಲಿಕೇರಿ, ಅಧ್ಯಕ್ಷರಾದ ಶ್ರೀಪಾಲ್ ಜೈನ್ ಬೆದ್ರಾಳ, ಉಪಾಧ್ಯಕ್ಷರಾದ ಕೆ.ಚಂದ್ರ ಪೂಜಾರಿ ಕೂಡಮರ, ಅನೂಪ್ ಟಿ.ವಿ ಬೆದ್ರಾಳ, ಕಾರ್ಯದರ್ಶಿಗಳಾದ ಡಿ.ಶರತ್‌ಚಂದ್ರ ನಾಯ್ಕ್ ನೆಲ್ಲಿಕೇರಿ ಹಾಗೂ ಹರೀಶ್ ಕುಲಾಲ್ ಬೆದ್ರಾಳ, ಜೊತೆ ಕಾರ್ಯದರ್ಶಿಗಳಾದ ಉಮೇಶ್ ಆಚಾರ್ಯ ಬೆದ್ರಾಳ ಹಾಗೂ ಹೊನ್ನಪ್ಪ ಗೌಡ ಬೆದ್ರಾಳ, ಕೋಶಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಬೆದ್ರಾಳ ಹಾಗೂ ಪ್ರಶಾಂತ್ ಕುಲಾಲ್ ಬೆದ್ರಾಳ, ಸಂಘಟನಾ ಕಾರ್ಯದರ್ಶಿಗಳಾದ ಕಿರಣ್ ಗೌಡ ಬೆದ್ರಾಳ ಹಾಗೂ ಗಣೇಶ್ ಆಚಾರ್ಯ ಬೆದ್ರಾಳ ಮತ್ತು ಸದಸ್ಯರಾದ ಕೊರಗಪ್ಪ ಕುಲಾಲ್ ಬೆದ್ರಾಳ, ನಾರಾಯಣ ಕುಲಾಲ್ ಬೆದ್ರಾಳ, ರಾಕೇಶ್ ಗೌಡ ಬೆದ್ರಾಳ, ಗಂಗಾಧರ್ ರೈ ಬೆದ್ರಾಳ, ಜಯಕರ ಶೆಟ್ಟಿ ಬೆದ್ರಾಳ, ಹರ್ಷಿತ್ ಕುಲಾಲ್ ಬೆದ್ರಾಳ, ಮೋಹನ್‌ದಾಸ್ ಕುಲಾಲ್ ಬೆದ್ರಾಳ, ಸುರೇಶ್ ಆಚಾರ್ಯ ಬೆದ್ರಾಳ, ಜಯಂತ ಕೊರೆಜಿಮಜಲು, ಕಮಲಾಕ್ಷ ಆಚಾರ್ಯ ಬೆದ್ರಾಳ, ಮೋನಪ್ಪ ನಾಯ್ಕ ಆರ್ಯಮುಗೇರು, ಈಶ್ವರ ನಾಯ್ಕ ಆರ್ಯಮುಗೇರು, ವಸಂತ ನಾಯ್ಕ ನೆಕ್ಕರೆ, ಕೃಷ್ಣಪ್ಪ ಗೌಡ ಕಂಚಲಗುರಿ, ಜನಾರ್ದನ ನಾಯ್ಕ ಕೊರಜಿಮಜಲು, ಗುರುಪ್ರಸಾದ್ ಕೊರಜಿಮಜಲು, ಬಾಬು ನಾಯ್ಕ ಕೊರಜಿಮಜಲು, ನಾಗೇಶ್ ಪೂಜಾರಿ ಎಲಿಕ, ಹರೀಶ್ ಪೂಜಾರಿ ಬೆದ್ರಾಳ, ದಯಾನಂದ ಕುಲಾಲ್ ಬೆದ್ರಾಳ, ಶ್ರೀಕಾಂತ್ ಬೆದ್ರಾಳ, ಗಣೇಶ್ ಗೌಡ ಪುಳಿತ್ತಡಿ, ರಾಜೇಶ್ ಗೌಡ ಸೊರ್ಕ, ವಿಶ್ವನಾಥ ಗೌಡ ಬೆದ್ರಾಳ, ಶಿವಪ್ರಸಾದ್ ನೆಕ್ಕರೆ, ವಿಜಯ ಕುಲಾಲ್ ಬೆದ್ರಾಳ, ಕೃಷ್ಣಪ್ಪ ಪೂಜಾರಿ ಕೂಡಮರ, ವೇಣುಗೋಪಾಲ ಕೊರಜಿಮಜಲು, ಲಕ್ಷ್ಮಣ ಪೂಜಾರಿ ಕೂಡಮರ, ನಾರಾಯಣ ಗೌಡ ಬೆದ್ರಾಳ, ಅಣ್ಣಿ ಪೂಜಾರಿ ನೆಕ್ಕರೆ-ಕೂಡಮರ, ರಮೇಶ ಪೂಜಾರಿ ಕೂಡಮರ ಸಹಿತ ಹಲವರು ಭಕ್ತಾದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here