ಫಿಲೋಮಿನಾ ಎಂ.ಎಸ್. ಡಬ್ಲೂ ವಿಭಾಗದಿಂದ ʼನಾನು ಮತ್ತು ನನ್ನ ಸ್ನೇಹಿತರು ಗ್ರಂಥಾಲಯದೆಡೆಗೆʼ ಅರಿವು ಕಾರ್ಯಕ್ರಮ 

0

ಪುತ್ತೂರು :ಗ್ರಂಥಾಲಯದಿಂದಲೇ  ಹಲವು ವಿಚಾರಗಳನ್ನು ಕಲಿಯಲು ಸಾಧ್ಯ. ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳು ಗ್ರಂಥಾಲಯದ ಸದ್ಬಳಕೆಯಿಂದ ದೇಶ ಅಳುವವರಾಗಿದ್ದಾರೆ. ಅಂತಹ ವ್ಯಕ್ತಿಗಳನ್ನು ಮಕ್ಕಳು ಮಾದರಿಯಾಗಿ ತೆಗೆದುಕೊಂಡು ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸವಣೂರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ  ಬಾಲಕೃಷ್ಣ ಹೇಳಿದರು. 

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಎಂ. ಎಸ್. ಡಬ್ಲೂ  ವಿಭಾಗ ಮತ್ತು ಸವಣೂರು ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ನಡೆದ “ನಾನು ಮತ್ತು ನನ್ನ ಸ್ನೇಹಿತರು ಗ್ರಂಥಾಲಯದೆಡೆಗೆ” ಎಂಬ ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಈಗಿನ ಮಕ್ಕಳು ಮೊಬೈಲ್ ಫೋನ್ ಗಳ ಬಳಕೆಯನ್ನು ಕಡಿಮೆ ಮಾಡಿ ಗ್ರಂಥಾಲಯದ ಕಡೆ ಗಮನಹರಿಸಬೇಕು. ಪ್ರತಿಯೊಬ್ಬರೂ ಮನೆಯಲ್ಲೇ ಪುಟ್ಟ ಗ್ರಂಥಾಲಯವೊಂದನ್ನು ಮಾಡಿ, ಅದನ್ನು ಓದುತ್ತಾ ಜ್ಞಾನ ಹೆಚ್ಚಿಸಿಕೊಳ್ಳಬೇಕು”ಎಂದರು. 

ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ ಮಾತನಾಡಿ, ಗ್ರಂಥಾಲಯ ಜ್ಞಾನದ ಭಂಡಾರ. ಪಂಚಾಯತ್ ನ ಗ್ರಂಥಾಲಯ ಸಾರ್ವಜನಿಕರ ಬಳಕೆಗೆಂದೇ ಇರುವುದರಿಂದ ಮಕ್ಕಳು ಇದರ ಉಪಯೋಗವನ್ನು ಹೆಚ್ಚಾಗಿ  ಪಡೆದುಕೊಳ್ಳಬೇಕು. ಗ್ರಂಥಾಲಯದಿಂದ ಜ್ಞಾನದ ಜೊತೆ ಕೌಶಲ್ಯವೂ ಅಭಿವೃದ್ಧಿಯಾಗುತ್ತದೆ ಎಂದು ಮಕ್ಕಳಿಗೆ ಗ್ರಂಥಾಲಯದ ಮಹತ್ವವನ್ನು ಹೇಳಿದರು. 

ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಪಿ. ಡಿ. ಒ. ಮನ್ಮಥ. ಕೆ., ಗ್ರಂಥಪಾಲಕಿ  ಸರಸ್ವತಿ, ಪಂಚಾಯತ್ ಸದಸ್ಯ ತಾರಾನಾಥ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಂ. ಎಸ್. ಡಬ್ಲೂ ವಿದ್ಯಾರ್ಥಿನಿ ಗಾಯನ ಸ್ವಾಗತಿಸಿ, ವಿದ್ಯಾರ್ಥಿ ಕೌಶಿಕ್ ಕೆ ಆರ್ ವಂದಿಸಿದರು. ವಿದ್ಯಾರ್ಥಿನಿ ಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here