




ಜೀವನದಲ್ಲಿ ಹಟ ಮತ್ತು ಛಲ ಇದ್ದರೆ ಏನನ್ನು ಸಾಧಿಸಬಹುದು – ಕುಮಾರ್ ಪೆರ್ನಾಜೆ



ಪೆರ್ನಾಜೆ: ಸ್ವರ ಸಿಂಚನ ಸಂಗೀತ ಶಾಲೆ, ವಿಟ್ಲ ಪಡಿಬಾಗಿಲು ಶಾಖೆಯ ದಶ ಸಂಭ್ರಮ ಕಾರ್ಯಕ್ರಮ ವಿಟ್ಲದ ಜಿಎಲ್ ಅಡಿಟೋರಿಯಂನಲ್ಲಿ ಡಿ 14ರಂದು ನಡೆಯಿತು.





ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕ, ಬರಹಗಾರ,ಕಲಾ ನಿರ್ದೇಶಕ, ಕಲಾ ಪೋಷಕ ಕುಮಾರ್ ಪೆರ್ನಾಜೆ ʼಪ್ರತಿಭೆ ಎಲ್ಲರಲ್ಲೂ ಇದೆ ಆದರೆ ಅದಕ್ಕೆ ಸೂಕ್ತ ಪ್ರೋತ್ಸಾಹ ವೇದಿಕೆ ಅಗತ್ಯ ಹಾಗೆ ಜೀವನದಲ್ಲಿ ಹಟ ಛಲ ಇದ್ದರೆ ಏನನ್ನು ಸಾಧಿಸಬಹುದು. ಬೆಳೆಯುವವರು ಬೆಳೆಯುತ್ತಲೇ ಇರುತ್ತಾರೆ. ಸ್ವರ ಸಿಂಚನ ಸಂಗೀತ ಶಾಲೆ ಯಶಸ್ಸಿನತ್ತ ಸಾಗಲಿ ಎಂದರು.
ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡಿ ಸ್ವರ ಸಿಂಚನ ಪ್ರಶಸ್ತಿಯನ್ನು ಸ್ವೀಕರಿಸಿ, ಸಂಸ್ಥೆಗೆ ಶುಭ ಹಾರೈಸಿದರು. ದಶಮಾನೋತ್ಸವ ಸನ್ಮಾನವನ್ನು ಯಕ್ಷಗಾನ ಭಾಗವತ ಎಲ್ಎಂ ಗೋವಿಂದ ನಾಯಕ್ ಪಾಲ್ಹೆಚ್ಚಾರು ಸ್ವೀಕರಿಸಿ, ಸಂಸ್ಥೆಯ ಬಗ್ಗೆ ಹಿತ ನುಡಿದರು. ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ಶ್ರೀ ಭಗವತಿ ದೇವಸ್ಥಾನ ವಿಟ್ಲದ ವ್ಯವಸ್ಥಾಪಕ ಕೇಶವ ಆರ್ ವಿ ಸಂದರ್ಭೋಚಿತವಾಗಿ ಮಾತನಾಡಿದರು.

ಶಿಕ್ಷಕಿ ಸವಿತಾ ಕೊಡಂದೂರು , ರಘುರಾಮ ಶಾಸ್ತ್ರಿ ಕೊಡಂದೂರು ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷ, ದಶಮಾನೋತ್ಸವ ಸಮಿತಿ ಸ್ವರ ಸಿಂಚನ ಸಂಗೀತ ಶಾಲೆ ಅಧ್ಯಕ್ಷ ರವಿಶಂಕರ್ ಸಿ ಮೂಡಂಬೈಲು ಮಾತನಾಡಿ,ಸವಿತಾ ಕೊಡಂದೂರು ಗ್ರಾಮೀಣ ಪ್ರದೇಶದಲ್ಲಿದ್ದು ಸಂಗೀತ ಆಸಕ್ತರಿಗೆ ವಿದ್ಯೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ, ವಿವಿಧಡೆಗಳಲ್ಲಿ ಸಂಗೀತ ಸ್ವರ ಸ್ಪರ್ಧೆಯಲ್ಲಿ ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಗೀತ ಶಿಕ್ಷಕಿ ಸವಿತಾ ಕೊಡಂದೂರು ಸ್ವಾಗತಿಸಿ, ವರದಿ ವಾಚಿಸಿದರು. ವಿದ್ವಾನ್ ಬಿ.ಗಿರೀಶ್ ಕುಮಾರ್ ಪುತ್ತೂರು, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು, ಕೃಷ್ಣ ಭಟ್ ವಿಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಮೇಶ್ ಬಿಕೆ ವಂದಿಸಿದರು. ಪರಮೇಶ್ವರ್ ಹೆಗಡೆ ಚಂದ್ರಶೇಖರ್ ಕೆ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಚೇರಿ, ಕು.ಸಿಂಚನ ಲಕ್ಷ್ಮಿ ಕೊಡಂದೂರು (ಸಹ ಶಿಕ್ಷಕಿ) ಇವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂದಿ ಪಕ್ಕ ವಾದ್ಯದಲ್ಲಿ ಮೃದಂಗವಾದಕರಾಗಿ ವಿದ್ವಾನ್ ಡಾ.ವಿ.ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ, ಗೋಪ ಕುಮಾರ್ ಘಟಂ ವಾದಕರಾಗಿ, ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ ಪಿಟೀಲು, ಅಭಿರಾಮ್ ಕೋಡಂಪಳ್ಳಿ ನಿರೂಪಣೆ, ಪದ್ಮರಾಜ ಚಾರ್ವಾಕ ಹಿಮ್ಮೇಳ ಕಲಾವಿದರಾಗಿ, ಸ್ವರಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು ನಿರ್ದೇಶನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.








