ಪುತ್ತೂರು: ಹೃದಯಾಘಾತದಿಂದ ನಿಧನರಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಕಾರ್ಯಾಧ್ಯಕ್ಷ ಚಾಮರಾಜನಗರ ಮೀಸಲಾತಿ ಕ್ಷೇತ್ರದ ಮಾಜಿ ಸಂಸದ, ಮಾಜಿ ಶಾಸಕ ಆರ್. ಧ್ರುವ ನಾರಾಯಣ್ರವರಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ನಿಂದ ಸಂತಾಪ ಸೂಚಕ ಸಭೆಯು ಮಾ.11ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈಯವರು ಧ್ರುವ ನಾರಾಯಣ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಸಂತಾಪ ಸೂಚಿಸಿದರು. ಬಳಿಕ ಮಾತನಾಡಿದ ಅವರು, ಧ್ರುವ ನಾರಾಯಣ್ ರವರು ಕಾಂಗ್ರೆಸ್ ಪಕ್ಷದ ಅತ್ಯುತ್ತಮ ರಾಜಕಾರಣಿಯಾಗಿದ್ದರು. ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿಯವರು ಮಾತನಾಡಿ, ಎನ್ಎಸ್ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ ಬಂದಿರುವ ದ್ರುವ ನಾರಾಯಣ್ರವರು ಓರ್ವ ಸಾಮಾಜಿಕ ನಾಯಕರಾಗಿದ್ದರು. ಅವರ ನಿಧನ ಬಡವ, ಬಲ್ಲಿದರ ಪಾಲಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ರಾಜ್ಯ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ದ್ರುವ ನಾರಾಯಣ್ರವರ ಗುಣಗಾನ ಮಾಡಿ, ಶುದ್ದ ಮನಸ್ಸಿನ ನಾಯಕರಾಗಿದ್ದರು. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತೆ ಅವರ ಕುಟುಂಬಕ್ಕೂ, ನಮಗೆಲ್ಲರಿಗೂ ನೀಡಲಿ ಎಂದು ಅವರು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎಎಚ್ಎ ಶಕೂರ್ ಹಾಜಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಆಲಿಕುಂಞಿ ಕೊರಿಂಗಿಲ, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ದಾಮೊಧರ ಭಂಡಾರ್ಕರ್, ರೋಷನ್ ರೈ ಬನ್ನೂರು, ವಿಕ್ಟರ್ ಪಾಯಿಸ್, ಸಿದ್ದೀಕ್ ಸುಲ್ತಾನ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಹಮೀದ್ ಕೊಮ್ಮೆಮಾರ್, ಆದಂ ಕಲ್ಲರ್ಪೆ, ಗಣೇಶ್ ನೇರೋಳ್ತಡ್ಕ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.