ಉತ್ತರಾಖಂಡದ ‘ಸರಸ್ ಫೇರ್’ಗೆ ಕಲ್ಲರ್ಪೆಯ ಅಂಬಿಕಾ ರಮೇಶ್

0

ಪುತ್ತೂರು: ಉತ್ತರಾಖಂಡ ರಾಜ್ಯದಲ್ಲಿ ಮಾರ್ಚ್ 19ರಿಂದ ನಡೆಯಲಿರುವ ಸರಸ್ ಫೇರ್’ನಲ್ಲಿ ಪುತ್ತೂರಿನ ಅವನಿ ಸಂಜೀವಿನಿ ಸಂಘದ ಅಂಬಿಕಾ ರಮೇಶ್ ಅವರು ಪಾಲ್ಗೊಳ್ಳುತ್ತಿದ್ದಾರೆ. ಸರಸ್ ಫೇರ್’ನಲ್ಲಿ ಭಾಗವಹಿಸಲು ರಾಜ್ಯದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಿಂದ ಪುತ್ತೂರಿನ ಕಲ್ಲರ್ಪೆ ನಿವಾಸಿ ಅಂಬಿಕಾ ರಮೇಶ್ ಭಾಗವಹಿಸುತ್ತಿದ್ದರೆ, ಇನ್ನೊಬ್ಬರು ರಾಯಚೂರಿನ ಸಿಂಧನೂರು ತಾಲೂಕಿನ ಲಕ್ಷ್ಮೀ. ಅಂಬಿಕಾ ರಮೇಶ್ ಅವರು ತೆಂಗಿನಕಾಯಿಯ ಚಿಪ್ಪಿನಿಂದ ಮಾಡಿರುವ ಅಲಂಕಾರಿನ ಉತ್ಪನ್ನಗಳು, ಉಪ್ಪಿನಕಾಯಿ, ಸ್ನ್ಯಾಕ್ಸ್ ಮೊದಲಾದ ಉತ್ಪನ್ನಗಳನ್ನುಸರಸ್ ಫೇರ್’ನಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಮಾರ್ಚ್ 19ರಿಂದ ಮಾರ್ಚ್ 28ರವರೆಗೆ ಉತ್ತರಾಖಂಡಿನ ಚಂಪಾವತಿನ ತನಕಪುರ ಸಮೀಪ ಸರಸ್ ಫೇರ್ ನಡೆಯಲಿದೆ.

LEAVE A REPLY

Please enter your comment!
Please enter your name here