ಎಡಮಂಗಲ: ಆಕಸ್ಮಿಕವಾಗಿ ಟ್ಯಾಪಿಂಗ್  ಕತ್ತಿ ಎದೆಗೆ ಹೊಕ್ಕು ಮಹಿಳೆ ಮೃತ್ಯು

0

ಕಡಬ :ಆಕಸ್ಮಿಕವಾಗಿ ಟ್ಯಾಪಿಂಗ್  ಕತ್ತಿ ಎದೆಗೆ ಹೊಕ್ಕು ಮಹಿಳೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ಮಾ.17ರಂದು ನಡೆದಿದೆ.

ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ ಎಂಬವರು ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಮೃತಪಟ್ಟವರು.

ಗೀತಾರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮುಗಿಸಿ ಸುಮಾರು ಬೆಳಿಗ್ಗೆ 7 ಗಂಟೆ ಹೊತ್ತಿಗೆ ಮನೆಗೆ ಹಿಂತಿರುಗುವಾಗ ಎಡವಿ ಬಿದ್ದರೆನ್ನಲಾಗಿದೆ. ಬೀಳುವಾಗ ಹರಿತವಾದ ಕತ್ತಿ ಎದೆಯೊಳಗೆ ಹೊಕ್ಕು ಮೃತಪಟ್ಟಿರುವುದಾಗಿ ಮೃತರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here