





ಕಡಬ: ಒಮ್ನಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪ ಜೆಎಮ್ಜೆ ಆಸ್ಪತ್ರೆಯ ಮುಂಭಾಗ ನ.22ರಂದು ಸಂಜೆ ನಡೆದಿದೆ.


ಬೈಕ್ ಸವಾರ ಮಹಮ್ಮದ್ ಆಶಿಕ್, ಸಹಸವಾರ ಸಿದ್ದೀಕ್ ಎಂಬವರು ಗಾಯಗೊಂಡವರಾಗಿದ್ದಾರೆ. ಕಡಬ ಕಡೆಯಿಂದ ಮರ್ದಾಳ ಕಡೆಗೆ ಹೋಗುತ್ತಿದ್ದ ಒಮ್ನಿ ಕಾರು (ಕೆಎ21 ಎನ್ 6947) ಅದರ ಚಾಲಕ ಮೊಹಮ್ಮದ್ ರಿಯಾಝ್ ಎಂಬವರು ರಸ್ತೆಯ ಬಲಬದಿಯ ಜೆಎಮ್ಜೆ ಆಸ್ಪತ್ರೆಯ ಕಡೆಗೆ ತಿರುಗಿಸಿದ ಪರಿಣಾಮ ಆಶಿಕ್ ಹಾಗೂ ಸಿದ್ದೀಕ್ ಎಂಬವರು ಪ್ರಯಾಣಿಸುತ್ತಿದ್ದ ಬೈಕ್ಗೆ (ಕೆಎ21, ವಿ 0602) ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಬೈಕ್ ಸಹಿತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಜೆಎಮ್ಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರಿಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















