ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

0

ಪುತ್ತೂರು:ಕಲಿಯುಗ ಕಲೆ, ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ,ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಕಲಶಾಭಿಷೇಕ, ತಂಬಿಲ ಸೂರ್ಯಪ್ರಕಾಶ ಅಂಗಿತ್ತಾಯ ನೇತೃತ್ವದಲ್ಲಿ ನಡೆಯಿತು.

ನೂತನವಾಗಿ ನಿರ್ಮಿಸಲಾಗಿರುವ ಸ್ವಾಮಿ ಕೊರಗಜ್ಜ ದೈವದ 50 ಅಡಿ ಎತ್ತರದ ಮೂರ್ತಿ ಸಮರ್ಪಣೆ ಮಾ.18ರಂದು ರಾತ್ರಿ ಗಂಟೆ 7.30ಕ್ಕೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಸ್ವಾಮಿ ಕೊರಗಜ್ಜ ದೈವದ ಮೂರ್ತಿಯ ಪಾದಸ್ಪರ್ಶದೊಂದಿಗೆ ನೂತನ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ.

ಸಂಜೆ 6ರಿಂದ ಅಗ್ನಿ ಹಾಕುವ ಕಾರ್ಯಕ್ರಮ ನಡೆದು ಬಳಿಕ 8.30ಕ್ಕೆ ಭಂಡಾರ ತೆಗೆದು ಅಗ್ನಿ ಸೇವೆ, ದೈವಗಳಿಗೆ ಎಣ್ಣೆಕೊಡುವ ಕಾರ್ಯಕ್ರಮ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ನಂತರ ಅಗ್ನಿ ಕಲ್ಲುರ್ಟಿ, ಮಂತ್ರಗುಳಿಗ, ಧರ್ಮದೈವ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ ದೈವಗಳ ವಿಜ್ರಂಭಣೆಯ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿಯವರು ತಿಳಿಸಿದ್ದಾರೆ.

‘ಮಹಿಮೆದ ಪಂಜುರ್ಲಿ’ ಯಕ್ಷಗಾನ ಬಯಲಾಟ: ರಾತ್ರಿ 7 ಗಂಟೆಯಿಂದ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ‘ಮಹಿಮೆದ ಪಂಜುರ್ಲಿ’ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ‘ರಂಗ್‌ದ ರಾಜೆ’ ಸುಂದರ ರೈ ಮಂದಾರ ಅವರು ವಿಶೇಷ ಹಾಸ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾರ್ವಜನಿಕ ಭಕ್ತಾದಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನುಮನಧನದ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಧರ್ಮದರ್ಶಿ ಮಣಿಸ್ವಾಮಿ ಮತ್ತು ಸ್ವಾಮಿ ಕೊರಗಜ್ಜ ಅಗ್ನಿ ಕಲ್ಲುಟಿ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here