ಬೆಂಗಳೂರು: ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕುಂಬಾರ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಕುಂಬಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.ಈ ನಿಗಮವು ಕುಂಬಾರ, ಚಕ್ರಸಾಲಿ, ಕುಲಾಲ ಸೇರಿದಂತೆ ಇನ್ನಿತರ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎ ನ ಕ್ರಮ ಸಂಖ್ಯೆ 6ಎ ಯಿಂದ ಕ್ಯೂವರೆಗೆ ಕ್ರಮವಾಗಿ ಕುಂಬಾರ, ಚಕ್ರಸಾಲಿ ಗುಣಗ, ಗಣಗಿ, ಕೊಡವ, ಕುಲ, ಕುಲಾಲ, ಕುಂಬಾರ್, ಕುಂಬಾರ್ಡ್, ಕುಮ್ಮಾರ, ಕಸವನ್ ,ಮೂಲ್ಯ, ಸಜ್ಜನ ಕುಂಬಾರ, ಖುಮಾರ, ಕುಂಬಾರ, ಖುಂಭಾರ, ಕುಲಾಲರ್ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪಾಹೀನ್ ಪರ್ವೀನ್ ಆದೇಶ ಹೊರಡಿಸಿದ್ದಾರೆ.