ಪಡುಮಲೆ ಜುಮಾ ಮಸ್ಜಿದ್ ಪಮ್ಮಲ ಆಂಡ್‌ನೇರ್ಚೆ, ಕೂಟು ಪ್ರಾರ್ಥನೆ, ಧಾರ್ಮಿಕ ಉಪನ್ಯಾಸ

0

ಸತ್ಯ ವಿಶ್ವಾಸಿಗಳು ಪವಿತ್ರ ರಂಝಾನ್‌ಗೆ ಸಜ್ಜಾಗಿ: ಸಯ್ಯದ್ ಪುತ್ತೂರು ತಂಙಳ್

ಪುತ್ತೂರು; ಮುಂದಿನ ಕೆಲವೇ ದಿನಗಳಲ್ಲಿ ಪವಿತ್ರ ರಂಝಾನ್ ತಿಂಗಳು ಪ್ರಾರಂಭಗೊಳ್ಳಲಿದ್ದು ಪ್ರತೀಯೊಬ್ಬ ವಿಶ್ವಾಸಿಯೂ ಇದಕ್ಕಾಗಿ ಸಜ್ಜಾಗಬೇಕು ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ಪುತ್ತೂರು ಹೇಳಿದರು.


ಪಡುಮಲೆ (ಪಮ್ಮಲ) ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಂಡ್ ನೇರ್ಚೆ ಮತ್ತು ಕೂರ್ಟು ಪ್ರಾರ್ಥನೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.


ಧಾರ್ಮಿಕ ಪ್ರವಚನ ನೀಡುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಾವು ಆಧ್ಯಾತ್ಮಿಕವಾಗಿ ಧನ್ಯರಾಗಬೇಕಿದೆ. ರಂಝಾನ್ ತಿಂಗಳಲ್ಲಿ ಪ್ರಾರ್ಥನೆ ಹಾಗೂ ದಾನ ಧರ್ಮಗಳನ್ನು ಹೆಚ್ಚಿಸುವ ಮೂಲಕ ರಂಝಾನ್ ಪವಿತ್ರ ತಿಂಗಳನ್ನು ನಾವು ಪ್ರತೀಯೊಬ್ಬರೂ ಗೌರವಿಸಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ತಂಙಳ್‌ರವರಿಂದ ದುವಾ ಮಜ್ಲಿಸ್ ನಡೆಯಿತು.ಪಾಳ್ಯತ್ತಡ್ಕ ಖತೀಬ್ ನಝೀರ್ ಅರhಹರಿ ಶುಭ ಹಾರೈಸಿದರು.


ಸರ್ವ ಧರ್ಮೀಯರ ಸಂಗಮ ಭೂಮಿ ; ಬಡಗನ್ನೂರು:
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಜಮಾತ್ ಕಮಿಟಿ ಅಧ್ಯಕ್ಷರಾದ ಹಾಜಿ ಮಹಮ್ಮದ್ ಬಡಗನ್ನೂರು ಕಳೆದ ೯ ವರ್ಷಗಳಿಂದ ಆಂಡ್‌ನೇರ್ಚೆ ಕಾರ್ಯಕ್ರಮ ನಡೆಯುತ್ತಿದೆ. ಚರಿತ್ರಾರ್ಹವಾದ ಕ್ಷೇತ್ರ ಇದಾಗಿದೆ. ಎಲ್ಲಾ ಧರ್ಮಿಯರ ಸಂಗಮ ಸ್ಥಳವಾಗಿ ಪಡುಮಲೆ ಮಸೀದಿಯಾಗಿರುತ್ತದೆ. ೮೦೦ ವರ್ಷಗಳ ಹಿಂದೆ ನಿರ್ಮಾಣಗೊಂಡ ಪಮ್ಮಲ ಮಸೀದಿ ಸೌಹಾರ್ದದ ಕೇಂದ್ರವಾಗಿ ಇಂದು ಕಂಗೊಳಿಸುತ್ತಿದೆ ,ಇಲ್ಲಿನ ಸಹಿಷ್ಣುತೆ ಶಾಶ್ವತವಾಗಿ ಉಳಿಯಬೇಕು, ಮುಂದಿನ ಪೀಳಿಗೆಗೂ ಇದು ಮುಂದುವರೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಪಡುಮಲೆ ಮಸೀದಿ ಐತಿಹ್ಯ ಎಲ್ಲರೂ ಬಲ್ಲವರಾಗಿದ್ದಾರೆ. ಇಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಬಾವರ ಹೆಸರಿನಲ್ಲಿ ಇಲ್ಲಿ ಪ್ರತೀ ವರ್ಷ ನಡೆಯುತ್ತಿರುವ ಆಂಡ್ ನೇರ್ಚೆ ಮತ್ತು ಕೂಟು ಪ್ರಾರ್ಥನೆಗೆ ಸಾವಿರಾರು ಮಂದಿ ಭಾಗವಹಿಸುತ್ತಿರುವುದು ಇಲ್ಲಿನ ಪವಾಡ ಒಂದು ಸಾಕ್ಷಿಯಾಗಿದೆ ಎಂದು ಹೇಳಿದರು. ಪಮ್ಮಲ ಮಸೀದಿಯ ಐತಿಹ್ಯ ಬರಹ ರೂಪದಲ್ಲಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದ್ದು ಇದು ಮುಂದಿನ ಪೀಳಿಗೆಗೂ ಒಂದು ಸೌಹಾರ್ಧತೆಯ ಕೊಡುಗೆಯಾಗಿ ಉಳಿದುಕೊಳ್ಳಲಿದೆ ಎಂದು ಹೇಳಿದರು.


ಎಲ್ಲಾ ಧರ್ಮಗಳು ಪ್ರೀತಿ ಮತ್ತು ಮಾನವೀಯತೆಯನ್ನು ಬೋಧಿಸುತ್ತದೆ; ಸಿರಾಜುದ್ದೀನ್ ದಾರಿಮಿ :
ಮುಖ್ಯ ಭಾಷಣ ಮಾಡಿದ ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಮಾತನಾಡಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂದು ಎಲ್ಲಾ ಧರ್ಮಗಳು ಕಲಿಸುತ್ತದೆ. ಎಲ್ಲಾ ಧರ್ಮಗಳ ತತ್ವಗಳು ಒಂದೇ ಮಾನವೀಯತೆ ಮತ್ತು ಪ್ರೀತಿಯನ್ನು ಧರ್ಮಗಳು ಕಲಿಸುತ್ತದೆ ಈ ನಡುವೆ ಧರ್ಮಗಳ ನಡುವೆ ವೈಮನಸ್ಸು, ದ್ವೇಷದ ಮಾತುಗಳು ಯಾಕೆ ಹುಟ್ಟಿಕೊಳ್ಳುತ್ತದೆ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ ಎಂದರು. ಧರ್ಮಗಳು, ನಂಬಿಕೆಗಳು, ಆರಾಧನಾ ಕ್ರಮ ಬೇರೆಯಾಗಿರಬಹುದು ಆದರೆ ನಾವೆಲ್ಲರೂ ಮಾನವರೇ ಆಗಿzವೆ ನಾವು ಪರಸ್ಪರ ದ್ವೇಷದಿಂದ ಬಾಳ್ವೆ ನಡೆಸುವ ಅಗತ್ಯತೆ ಇದೆಯೇ ಎಂಬುದನ್ನು ಪ್ರತಿಯೊಬ್ಬರೂ ಆಲೋಚನೆ ಮಾಡಬೇಕು ಎಂದ ಅವರು, ಟಿಪ್ಪುವಿನ ಚಿರಿತ್ರೆಯನ್ನು ತಿರುಚಿ ಟಿಪ್ಪುವನ್ನು ಮತಾಂಧನಂತೆ ಚಿತ್ರಿಸಲಾಗಿದೆ . ಟಿಪ್ಪು ಯಾವುದೇ ಧರ್ಮವನ್ನು ದ್ವೇಷಿಸಿಲ್ಲ ಇತಿಹಾಸವನ್ನು ನಾವು ಓದಿ ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ.ಟಿಪ್ಪುವಿನ ಸಮಾಧಿ ಬಳಿಯೇ ಶ್ರೀರಂಗನಾಥ ದೇವಾಲಯ ಇರುವುದೇ ಟಿಪ್ಪುವಿನ ಸೌಹಾರ್ದತೆಗೆ ಸಾಕ್ಷಿಯಾಗಿದೆ ಇದನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮುಂಡೋಳೆ ಖತೀಬ್ ಅಶ್ರಫ್ ರಹ್ಮಾನಿ, ಪಮ್ಮಲ ಮುಅಲ್ಲಿಂ ಶಾಫಿ ಅಝ್ಹರಿ, ಕೊಯಿಲ ಮುಅಲ್ಲಿಂ ಸದಿಕ್ ಮುಸ್ಲಿಯಾರ್, ಮಿನಾವ ಉ ಸದರ್ ಮುಅಲ್ಲಿಂ ಇಬ್ರಾಹಿಂ ಮುಸ್ಲಿಯಾರ್, ಜಮಾತ್ ಕಮಿಟಿ ಪದಾಧಿಕಾರಿಗಳು, ಜಮಾಅತರು , ಮಹಿಳೆಯರು , ಮದ್ರಸ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ೭ ರಿಂದ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು.

ಧ್ವಜಾರೋಹಣದ ಮೂಲಕ ಕಾಯಕ್ರಮಕ್ಕೆ ಚಾಲನೆ

ಇತಿಹಾಸ ಪ್ರಸಿದ್ದ ಪಡುಮಲೆ ಜುಮಾ ಮಸ್ಜಿದ್ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಂಡ್‌ನೇರ್ಚೆ ಮತ್ತು ಕೂಟು ಪ್ರಾರ್ಥನೆ ಕಾರ್ಯಕ್ರಮ ಮಾ. ೧೭ರಿಂದ ೧೮ ಮತ್ತು ೧೯ ರಂದು ಮಸೀದಿ ವಠಾರದಲ್ಲಿ ನಡೆಯಲಿದ್ದು, ಮಾ. ೧೭ ರಂದು ಜುಮಾ ನಮಾಜಿನ ಬಳಿಕ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರುರವರು ಧ್ವಜಾರೋಹಣ ಮಾಡುವ ಮೂಲಕ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಡುಮಲೆ ಜಮಾತ್ ಖತೀಬರಾದ ಶಂಸುದ್ದೀನ್ ದಾರಿಮಿ, ಮುಅಲ್ಲಿಂ ಶಾಫಿ ಅಝ್ಹರಿ, ಜಮಾತ್ ಕಮಿಟಿ ಉಪಾಧ್ಯಕ್ಷರಾದ ಫಕ್ರುದ್ದೀನ್, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿಗಳಾದ ಅಲಿ ಹಾಜಿ, ಅಲಿಕುಂಞಿ ಕಾವುಂಜ, ಮಜೀದ್ ಮಿನಾವು, ಬಿ ಟಿ ಹಸೈನಾರ್, ಆಲಿಕುಂಞಿ ಡೆಂಬಳೆ, ಆದಂ ಹಾಜಿ ಡೆಂಬಾಳೆ, ಮತ್ತು ಜಮಾತರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here