ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ. 8 ರಿಂದ 13 ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕಾರ್ಯಕರ್ತರ ಅಭಿನಂದನಾ ಸಭೆಯು ಮಾ. 19 ರಂದು ಶ್ರೀ ದೇವಿ ಸಭಾಭವನದಲ್ಲಿ ನಡೆಯಿತು.
ಆಡಳಿತ ಸಮಿತಿಯ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ ಯವರು ಮಾತನಾಡಿ ಅಭೂತಪೂರ್ವ ಬ್ರಹ್ಮಕಲಶ ಶ್ರೇಷ್ಠವಾದ ದೇವರ ಕಾರ್ಯ ನಡೆದಿದೆ.. ಈ ಪುಣ್ಯಪ್ರದವಾದ ಕೈಂಕರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಪ್ರತಿಯೊಬ್ಬನಿಗೂ ದೇವಿಯ ಅನುಗ್ರಹ ಪ್ರಸಾದ ಲಭಿಸಲಿ’ ಎಂದರು.
ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಲ್ ಮಾತನಾಡಿದರು.
ಆಡಳಿತ ಸಮಿತಿಯ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ನಾರಾಯಣ ಭಟ್ಟ್ ಮಲ್ಯ, ಕೋಶಾಧಿಕಾರಿ ಉದಯ್ ಕುಮಾರ್ ದಂಬೆ, ಕಾರ್ಯದರ್ಶಿ ಬಿ ಕೆ ರವಿ ದಲ್ಕಜೆ, ಮಹಿಳಾ ಸಮಿತಿಯ ಅಧ್ಯಕ್ಷೆ ನವಿನಲತಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಿಪ್ರಸಾದ್ ಕಲ್ಲಾಜೆ, ಜಯಶ್ಯಾಂ ನೀರ್ಕಜೆ, ಲಕ್ಮಣ ಸರವು, ವಿಶ್ವನಾಥ ರೈ ಕೋಡಂದೂರು ಸಂದರ್ಭೋಚಿತವಾಗಿ ಮಾತನಾಡಿದರು.
ಮಹಿಳಾ ಸಮಿತಿ ಅಧ್ಯಕ್ಷೆ ನವೀನಲತಾ ಶಾಸ್ತ್ರಿಯವರು ಮಹಿಳಾ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಬಗ್ಗೆ ಶ್ಲಾಘಿಸಿ ಸಹಕಾರಕ್ಕಾಗಿ ವಂದಿಸಿದರು. ಸುಮಿತ್ರಾ ಗರಡಿ ಪ್ರಾರ್ಥಿಸಿ, ಜಯಶ್ಯಾಂ ನೀರ್ಕಜೆ ಸ್ವಾಗತಿಸಿದರು. ದೇವಿಪ್ರಸಾದ್ ಕಲ್ಲಾಜೆ ವಂದಿಸಿದರು. ಅಜೇಯ್ ಶಾಸ್ತ್ರಿ ನಿರೂಪಿಸಿದರು.