ಅಂತರಾಷ್ಟ್ರೀಯ ಯೋಗ ಉತ್ಸವದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮೋನಿಷ್ ತಂಟೆಪ್ಪಾಡಿಗೆ ಪ್ರಶಸ್ತಿ

0

ಕಾಣಿಯೂರು: ನೆಹರು ಯುವ ಕೇಂದ್ರ – ಬೆಂಗಳೂರು ಅರ್ಬನ್ ಮಿನಿಸ್ಟರಿ ಆಫ್ ಯೂತ್ ಅಫ್ಫೇರ್ಸ್ ಅಂಡ್ ಸ್ಪೋರ್ಟ್ಸ್ , ಅವಿನಾಶ್ ಯೋಗ ಅಂಡ್ ಅರೋಬಿಕ್ಸ್ ಇನ್ಸ್ಟಿಟ್ಯೂಟ್ ಆಚಾರ್ಯ ಯೋಗ ಯೂತ್ ಕ್ಲಬ್ ಅಂಡ್ ಜಮುನಾ ರವಿ ಫೌಂಡೇಶನ್ ಇವರು ಆನ್ಲೈನ್ ನಲ್ಲಿ ಮಾ 4 ರಂದು ನಡೆಸಿದ ಮೊದಲನೇ ವರ್ಷದ ಬೆಂಗಳೂರು ಅಂತರಾಷ್ಟ್ರೀಯ ಯೋಗ ಉತ್ಸವ -2023 ಯೋಗಾಸನ ಸ್ಪರ್ಧೆಯಲ್ಲಿ 10 ರಿಂದ 15ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿ ಮೋನಿಷ್ ತಂಟೆಪ್ಪಾಡಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಸುಳ್ಯ ತಾಲೂಕಿನ ತಂಟೆಪ್ಪಾಡಿಯ ವಿಶ್ವನಾಥ್ ಗೌಡ ಮತ್ತು ದಯಮಾಣಿ ರವರ ಪುತ್ರರಾಗಿರುವ ಇವರು ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here