ಪುತ್ತೂರು : ಮಹಿಳೆಯರ ಹಾಗೂ ಯುವತಿಯರ ಮನ ಮೆಚ್ಚುವಂಥ ಚೆಂದ- ಚೆಂದದ ಹಲವೂ ಪ್ರಖ್ಯಾತ ಕಂಪನಿಗಳ, ವಿಧ ವಿಧ ಶೈಲಿಯ ಬ್ರಾಂಡೆಡ್ ಒಳ ಉಡುಪುಗಳ ಬೃಹತ್ ಮಳಿಗೆ, ಲಶ್ ಫ್ಯಾಶನ್ ಇನ್ಸೈಡ್ ಇದರ ಚೊಚ್ಚಲ ಶಾಖೆ ಮಾ.23 ರಂದು ಮುಖ್ಯರಸ್ತೆ ಜಿ.ಎಲ್.ಒನ್ ಮಾಲ್ ಇದರ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.
ಜಿಎಲ್ ಮಾಲ್ ನ ಮಾಲೀಕರಾದ ಜಿ.ಎಲ್.ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ ದಂಪತಿ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಮಳಿಗೆ ಉದ್ಘಾಟನೆ ನೆರವೇರಿಸಿದರು. ಆ ಬಳಿಕ ಮಾತನಾಡಿ ಅವರು, ಇದೊಂದು ಪುತ್ತೂರಿನಲ್ಲೇ ಹೊಸದಾದ ಪರಿಕಲ್ಪನೆಯಾಗಿದೆ.ಎಲ್ಲೇ ಹೋದರು ಬ್ರಾಂಡೆಡ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಇದ್ದೇ ಇದೆ, ಎಲ್ಲರ ಸಹಕಾರದಿಂದ ಸಂಸ್ಥೆ ಬೆಳಗಲಿಯೆಂದು ಶುಭ ಹಾರೈಸಿದರು.
ಸುಳ್ಯ ನೆಹರು ಮೆಮೊರಿಯಲ್ ಕಾಲೇಜು ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಮಾತನಾಡಿ , ಗ್ರಾಹಕ ಜನತೆಯ ಪ್ರೀತಿಯ ಮಳಿಗೆಯಾಗಿ ,ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿಯೆಂದು ಹರಸಿದರು.
ಮುಳಿಯ ಜ್ಯುವೆಲ್ಲರ್ಸ್ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ , “ಮರಳಿ ಮಣ್ಣಿಗೆ” ಎಂಬ ಉಕ್ತಿಯನ್ನು ಸಂಸ್ಥೆ ಮಾಲಕಿ ಮಾಲಿನಿ ಕಶ್ಯಪ್ ಮತ್ತೋಮ್ಮೆ ಸಾಬೀತು ಪಡಿಸಿದ್ದಾರೆ.ವಿದೇಶ ಬಿಟ್ಟು ಊರಿನಲ್ಲೇ ಉದ್ಯಮ ಆರಂಭಿಸಿ ,ಉದ್ಯೋಗದಾತೆಯಾಗಿದ್ದಾರೆ. ಇಂಥಹ ಮಾಳಿಗೆಯಿಂದಾಗಿ ದೂರದ ಊರಿನ ಅಲೆದಾಟವೂ ತಪ್ಪಿದೆ . ಮೊದಲ ಬಾರಿಗೆ ಪುತ್ತೂರಿನಲ್ಲೂ ಹೊಸ ಹೊಸ ವಿನ್ಯಾಸವನ್ನು ಪರಿಚಯಿಸಿದ್ದಿರಿ, ನಿಮ್ಮ ಈ ಸೇವೆ ಹೀಗೇ ಮುಂದುವರಿಯಲಿ ಎಂದರು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ, ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಹರಿಲೇಖ, ಹಾಗೂ ಮಿಸ್ ಕರ್ನಾಟಕ ಕಿಂಜಲ್ ಕೂಡ ಶುಭ ನುಡಿಗಳನ್ನಾಡಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹರಸಿದರು.
ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಡಾ. ಸುರೇಶ್ ಪುತ್ತೂರಾಯ , ಸಾವಿತ್ರಿ ರಾಜ್ ಹಾಗೂ ಅನೂಪ್ ರಾಜ್ , ಸಹಿತ ಪುತ್ತೂರು ಜೇಸಿ ಸದಸ್ಯರು ಹಾಗೂ ಹಲವೂ ಅತಿಥಿಗಳು ಉಪಸ್ಥಿತರಿದ್ದರು .ಮೇಘನಾ ಕಶ್ಯಪ್ ಹಾಗೂ ಅಮಿತ್ ಲಾಲ್ ಮತ್ತು ಸಿಬಂದಿಗಳು ಸಹಕಾರ ನೀಡಿದರು.ಮರಿಕೆ ಸಾವಯವ ಮಳಿಗೆ ಮಾಲಕ ಸುಹಾಸ್ ಮರಿಕೆ ನಿರೂಪಿಸಿದರು.
ಮಾಲಿನಿ ಕಶ್ಯಪ್ ಮಾತನಾಡಿ , ನಿಮ್ಮೆಲ್ಲರ ಪ್ರೀತಿ ,ಬೆಂಬಲ ಹಾಗೂ ಅಶೀರ್ವಾದದಿಂದ ,ಇದೀಗ ಚೊಚ್ಚಲ ಶಾಖೆಯನ್ನು ಆರಂಭಿಸಿದ್ದೇವೆ.
ಬೇಸಿಗೆ ಉಡುಪುಗಳು, ಒಳ ಉಡುಪುಗಳು, ಶೇಪ್ ವೇರ್, ಸ್ಪೋರ್ಟ್ಸ್ ವೇರ್ ಇವುಗಳ ಬೃಹತ್ ಸಂಗ್ರಹವಿದ್ದು, ಶುಭಾರಂಭದ ಪ್ರಯುಕ್ತ ಪ್ರಥಮವಾಗಿ 50 ಗ್ರಾಹಕರಿಗೆ ಲಶ್ ಉತ್ಪನ್ನಗಳ ಮೇಲೆ 20% ರಿಯಾಯಿತಿ ಇದೆ ಹಾಗೂ ಪಾರ್ಕಿಂಗ್ ಕೂಪನ್ ಕೂಡ ಮಳಿಗೆಯಲ್ಲಿ ಸಿಗಲಿದ್ದು ,ಪ್ರಿಯ ಗ್ರಾಹಕರು ಈ ಕೊಡುಗೆಯ ಪ್ರಯೋಜನ ಪಡೆಯುವಂತೆ ವಿನಂತಿಸಿ ,ವಂದಿಸಿದರು.