ನಾಣಿಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

0

ಕಾಣಿಯೂರು: ದ ಕ ಜಿ ಪಂ ಹಿ ಪ್ರಾ ಶಾಲೆ ನಾಣಿಲದಲ್ಲಿ 2022-23 ನೇ ಸಾಲಿನ 7 ನೇ ಮಕ್ಕಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಮಾ 23ರಂದು ನಡೆಯಿತು.
ಕಿರಿಯ ವಿದ್ಯಾರ್ಥಿಗಳು ವಿದಾಯ ಕೋರಿದರು.


ಬೀಳ್ಕೊಳ್ಳುತ್ತಿರುವ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಶಾಲಾ ಶಿಕ್ಷಕವೃಂದದವರು ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವಸಂತ್ ದಲಾರಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಮ್ ಸಿ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ಪದ್ಮಯ್ಯ ಗೌಡ ರವರು ಸ್ವಾಗತಿಸಿ, ಸಹ ಶಿಕ್ಷಕಿಯಾದ ಲೀನಾ ಲಸ್ರಾದೋ ವಂದಿಸಿದರು.

LEAVE A REPLY

Please enter your comment!
Please enter your name here