ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾ:21ರಿಂದ ಆರಂಭಗೊಂಡು, ಮಾ.24ರಿಂದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಮಾ:21ರಂದು ಬೆಳಿಗ್ಗೆ ಗೊನೆ ಮೂಹೂರ್ತದೊಂದಿಗೆ ಚಾಲನೆ ದೊರೆತು ಮಾ:24ರಂದು ಬೆಳಿಗ್ಗೆ ಮಹಾಗಣಪತಿಹೋಮ ಮತ್ತು ಚಂಡಿಕಾಯಾಗದ ಪ್ರಾರಂಭಗೊಂಡು, ಉಗ್ರಾಣ ತುಂಬಿಸಿ, ಭಕ್ತಧಿಗಳಿಂದ ಕೆಯ್ಯೂರು ಮಹಾದ್ವಾರದ ಬಳಿಯಿಂದ ಚೆಂಡೆ ಕುಣಿತ, ಭಜನಾ ಕುಣಿತಗಳೊಂದಿಗೆ ಭಕ್ತರು ನೀಡಿದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ಬಳಿಕ ಮಹಾಗಣಪತಿ ಹೋಮ ಮತ್ತು ಚಂಡಿಕಾಯಗದ ಪೂರ್ಣಾಹುತಿ, ಶ್ರೀ ದೇವರಿಗೆ ಸಾನಿಧ್ಯ ಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮಾ:26ರಂದು ಮಧ್ಯಾಹ್ನಮಹಾಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ಬಳಿಕ “ಕೆಯ್ಯೂರು ಬೇಡಿ” ಎಂದೇ ಪ್ರಸಿದ್ಧಿ ಪಡೆದು ಕೊಂಡಿರುವ ಸುಡುಮದ್ದು ಪ್ರದರ್ಶನ ನಡೆಯಿತು.
ಮಾ27ರಂದು ಮಹಾಗಣಪತಿ ಹೋಮ ಕೋಶ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ,ಮಹಾಪೂಜೆ, ವೈಧಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆದು ರಾತ್ರಿ ರಂಗಪೂಜೆ, ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ದತ್ತು ಇಲಾಖಾ ಸಹಾಯಕ ಆಯುಕ್ತ ಗುರುಪ್ರಸಾದ್, ದಾರ್ಮಿಕ ದತ್ತು ಇಲಾಖಾ ಪರಿವೀಕ್ಷಕ ಶ್ರೀಧರ, ಕೆಯ್ಯೂರು ಬೀಟ್ ಪೋಲಿಸ್ ಅಧಿಕಾರಿ ದಯಾನಂದ , ಸಮಿತಿಯ ಸದಸ್ಯರುಗಳಾದ.ಪ್ರದಾನ ಅರ್ಚಕ ಶ್ರೀನಿವಾಸ ರಾವ್, ಕೆ.ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೆರ್ಲ, ಚರಣ್ ಕುಮಾರ್ ಸಣಂಗಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಮಮತಾ ಎಸ್ ರೈ ಕೆಯ್ಯೂರು, ಈಶ್ವರಿ ಜೆ.ರೈ ಸಂತೋಷ್ ನಗರ, ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಶ್ರಿ ಕ್ಷೇತ್ರ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರು, ಸದಸ್ಯರುಗಳು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಅದ್ಯಕ್ಷ, ಸರ್ವಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು, ಅರ್ಚಕ ವೃಂದ ,ನೌಕರವೃಂದ ಮತ್ತು ಊರ ಪರವೂರ ಸಾವಿರಾರು ಭಕ್ತಾಧಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು.
ಮಾ: 28ರಂದು ಬೆಳಿಗ್ಗೆ ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ಶ್ರೀ ರಕ್ತೇಶ್ವರಿ,ಪಿಲಿಚಾಮುಂಡಿ ನೇಮ ನಡೆದು, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆದು ಅಪರಾಹ್ನ ಕುಪ್ಪೆಪಂಜುರ್ಲಿ, ಗುಳಿಗ ದೈವದ ನೇಮ ನಡೆದು ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆದು,ಶ್ರೀ ದುರ್ಗಾ ಬಜನಾ ಮಂಡಳಿ ಕೆಯ್ಯೂರು ಇವರ ನೇತೃತ್ವದಲ್ಲಿ ಪ್ರತಿ ದಿನ ಆಮಂತ್ರಿತ ಭಜನಾ ಮಂಡಳಿಯವರಿಂದ ನಿರಂತರ ಭಜನಾ ಕಾರ್ಯಕ್ರಮ ನಡೆದು ಜಾತ್ರೋತ್ಸವವು ಸಂಪನ್ನಗೊಂಡಿತು.