ಮಾ.31ಕ್ಕೆ ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಯ ಮೆಕ್ಯಾನಿಕಲ್ ಸೀನಿಯರ್ ಆಪರೇಟರ್ ಲಕ್ಷ್ಮೀನಾರಾಯಣ ಗೌಡ ಬೆದ್ರಾಳ ನಿವೃತ್ತಿ

0

ಪುತ್ತೂರು: ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಮೆಕ್ಯಾನಿಕಲ್ ಸೀನಿಯರ್ ಆಪರೇಟರ್ ಲಕ್ಷ್ಮೀನಾರಾಯಣ ಗೌಡ ಬೆದ್ರಾಳ ಅವರು ಮಾ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ವಿವಿಧ ಹುದ್ದೆ ಅಲಂಕರಿಸಿ, ಮೆಕ್ಯಾನಿಕಲ್ ಸೀನಿಯರ್ ಆಪರೇಟರ್ ಆಗಿ ಸುದೀರ್ಘ 35 ವರ್ಷಗಳ ಕರ್ತವ್ಯ ನಿರ್ವಹಿಸಿದ್ದ ಅವರು ಬೆದ್ರಾಳ ನಿವಾಸಿಯಾಗಿದ್ದಾರೆ. ದಿ.ರಾಮಣ್ಣ ಗೌಡ, ಪೂವಕ್ಕ ದಂಪತಿ ಪುತ್ರರಾಗಿರುವ ಇವರು ತನ್ನ ಎಳೆ ವಯಸಿನಲ್ಲಿ ದೀಪಕ್ ಗ್ಯಾರೇಜ್ ಮತ್ತು ಮಹಾಲಿಂಗೇಶ್ವರ ಗ್ಯಾರೇಜ್‌ನಲ್ಲಿ ಮ್ಯಾಕನಿಕ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಅಲ್ಲಿಂದ ಹಂತ ಹಂತವಾಗಿ ಮೆಕ್ಯಾನಿಕಲ್ ಸೀನಿಯರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಬೆದ್ರಾಳ ನವೋದಯ ನಿವಾಸಿಯಾಗಿರುವ ಇವರು ತಾಯಿ ಪೂವಕ್ಕ, ಪತ್ನಿ ನಾಗವೇಣಿ, ಪುತ್ರರಾದ ಹರ್ಷಿತ್ ಮತ್ತು ಶೋಭಿತ್ ಜೊತೆ ಸುಖಿ ಸಂಸಾರ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here