ಪುತ್ತೂರು: ನಗರಸಭೆ 15ನೇ ಹಣಕಾಸು ಯೋಜನೆಯಡಿ ರೂ. 10ಲಕ್ಷ ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ 42 ಕಡೆಗಳಲ್ಲಿ ಹಸಿ ಮತ್ತು ಒಣ ಕಸದ ತೊಟ್ಟಿ ಅಳವಡಿಕೆಗೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಚಾಲನೆ ನೀಡಿದರು.
ಸಾರ್ವಜನಿಕರಿಗೆ ಉಪಯೋಗ ಆಗುವ ನೆಲೆಯಲ್ಲಿ ಕಸದ ತೊಟ್ಟಿಗಳನ್ನು ಆಯ್ದ 42 ಕಡೆಗಳಲ್ಲಿ ಅನುಷ್ಟಾನ ಮಾಡಲಾಗುವುದು. ಈ ಕಸದ ತೊಟ್ಟಿಯ ಮುಚ್ಚಳ ತೆರೆದು ಕಸ ಹಾಕಿದ ಬಳಿಕ ಸ್ವಯಂ ಪ್ರೇರಿತವಾಗಿ ಮುಚ್ಚುತ್ತದೆ. ಹಸಿ ಮತ್ತು ಒಣ ಕಸದ ಪ್ರತ್ಯೇಕ ಕಸದ ತೊಟ್ಟಿಗಳಿದ್ದು, ಸಾರ್ವಜನಿಕರು ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಮತ್ತು ಜಾತ್ರೆಯ ಮುಂದೆ ಅದನ್ನು ಅಳವಡಿಸುತ್ತೇವೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಮಾಹಿತಿ ನೀಡಿದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಅರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ವರದಲಕ್ಷ್ಮಿ, ಕಚೇರಿ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.